ಕಾಸರಗೋಡು: ಕರ್ನಾಟಕ ಸಮಿತಿ ಮಾಜಿ ಅಧ್ಯಕ್ಷ, ಮಾಜಿ ಶಾಸಕ, ಕನ್ನಡ ಹೋರಾಟಗಾರ ದಿ. ಯು.ಪಿ ಕುಣಿಕುಳ್ಳಾಯ ಅವರ ಕನ್ನಡದ ಮೇಲಿನ ಪ್ರೀತಿ ಹಾಗೂ ಕನ್ನಡಪರ ಹೋರಾಟ ಅವರನ್ನು ಧೀಮಂತ ನೇತಾರರನ್ನಾಗಿಸಿರುವುದಾಗಿ ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ತಿಳಿಸಿದ್ದಾರೆ.
ಅವರು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ವತಿಯಿಂದ ಕಾಸರಗೋಡು ಬೀರಂತಬೈಲು ಕನ್ನಡ ಅಧ್ಯಾಪಕರ ಭವನದಲ್ಲಿ ನಡೆದ ದಿ. ಯು.ಪಿ ಕುಣಿಕುಳ್ಳಾಯ ಸಂಸ್ಮರಣೆ ಮತ್ತು 'ಇವರೆಲ್ಲಿಯವರು'ಕೃತಿಯ ಚಿಂತನ ಮಂಥನ ಸಮಾರಂಭದಲ್ಲಿ ಸಂಸ್ಮರಣಾ ಭಾಷಣ ಮಾಡಿದರು.
ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಬಬಿತಾ ಎ ಅವರು 'ಇವರೆಲ್ಲಿಯವರು' ಕೃತಿಯ ಬಗ್ಗೆ ಚಿಂತನ ಮಂಥನ ನಡೆಸಿದರು ಈ ಸಂದರ್ಭ ಮಾತನಾಡಿದ ಅವರು, ದಿ. ಯು.ಪಿ ಕುಣಿಕುಳ್ಳಾಯ ಅವರ ದೇಶಪ್ರೇಮ ಮತ್ತು ಕನ್ನಡ ಭಾಷೆಯ ಮೇಲಿನ ಪ್ರೀತಿ ಕೃತಿಯಲ್ಲಿ ಅಚ್ಚೊತ್ತಿರುವುದಾಗಿ ತಿಳಿಸಿದರು.
ನಿವೃತ್ತ ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿ, ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಮಹಾಲಿಂಗೇಶ್ವರ ರಾಜ್, ನಿವೃತ್ತ ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿ, ಜಯನಾರಾಯಣ ತಾಐನ್ನೂರು, ಸಾಹಿತಿ ವೈ. ಸತ್ಯನಾರಾಯಣ, ರಘು ಮೀಪುಗುರಿ, ನಿವೃತ್ತ ಮುಖ್ಯ ಶಿಕ್ಷಕ ಕೆ. ಸತೀಶ್, ಶಶಿಧರ ಪಂಡಿತ್, ಸತೀಶ್ ಕೂಡ್ಲು, ಜಯಶೀಲ ಕೆ, ಜಾಹ್ನವಿ, ಎಂ.ಎಸ್. ನವೀನಚಂದ್ರ, ಡಾ. ರಾಜಗೋಪಾಲ್ ಉಪಸ್ಥಿತರಿದ್ದರು.
ಕೆಪಿಎಸ್‍ಸಿ ನಿವೃತ್ತ ಅಧೀನ ಕಾರ್ಯದರ್ಶಿ ಶ್ಯಾಮರಾವ್ ಉಂಡೆಮನೆ ಒಡನಾಟದ ಸವಿನೆನಪು ಹಂಚಿಕೊಳ್ಳುವರು.
ಸಂಗೀತ-ನೃತ್ಯ ಶಿಕ್ಷಕಿ ಹರಿಣಾಕ್ಷಿ ವಿ ಹಾಗೂ ಪುಷ್ಪಲತಾ ಪಿ. ಅವರಿಂದ ನಾಡಗೀತೆಗಳ ಗಾಯನ ನಡೆಯಿತು. ಗಣೇಶ್ ಪ್ರಸಾದ್ ಪಾಣೂರು ಸ್ವಾಗತಿಸಿದರು. ಪುನೀತ್‍ಕೃಷ್ಣ ವಂದಿಸಿದರು.





