ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಿಂದ ಹೊರಗುಳಿದಿರುವ 1031ಮಂದಿ ಸಂತ್ರಸ್ತರನ್ನು ಮರಳಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಎಂಡೋಸಲ್ಫಾನ್ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಧರಣಿ ನಡೆಯಿತು.
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಧರಣಿ ಉದ್ಘಾಟಿಸಿ ಮಾತನಾಡಿ, ಅಂದು ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಹಾಗೂ ಅವರ ತಾಯಂದಿರ ಉಪಸ್ಥಿತಿಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಯಾರಾಗಬೇಕು. ಮುಂದೆ ಸಂತ್ರಸ್ತರನ್ನು ಬೀದಿಗಿಳಿದು ಹೋರಾಟ ನಡೆಸದಂತೆ ಸರ್ಕಾರ ನೋಡಿಕೊಳ್ಳಬೇಕು. ಎಂಡೋಸಲ್ಫಾನ್ ಸಂಬಂಧಿ ಕಾಯಿಲೆಯಿಂದ ಬಳಲುವವರಿಗೆ ಅಗತ್ಯ ಔಷಧ, ಅವರಿಗೆ ಮಾಸಿಕ ಪಿಂಚಣಿ ವಿಳಂಬವಿಲ್ಲದೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದರು.
ಶಾಸಕರಾದ ಎನ್.ಎ.ನೆಲ್ಲಿಕುನ್, ಎ.ಕೆ.ಎಂ.ಅಶ್ರಫ್, ಹೋರಾಟ ಸಮಿತಿ ಪದಾಧಿಕಾರಿಗಳಾದ ಎಂ.ಕೆ. ಅಜಿತಾ, ಅಂಬಲತ್ತರ ಕುಞÂಕೃಷ್ಣನ್, ಡಾ. ಡಿ.ಸುರೇಂದ್ರನಾಥ, ಸುಬೈರ್ ಪಡ್ಪು, ಅಬ್ದುಲ್ಲಕುಂಜಿ ಚೆರ್ಕಳಂ, ಜಿಯಾಸ್ ನಿಲಂಬೂರ್, ಪಿ.ಪ್ರದೀಪ್, ಮುಹಮ್ಮದ್ ವಡಕ್ಕೇಕರ, ಸುಲೇಖಾಮಹಿನ್, ಪ್ರಮೀಳಾ ಮಜಲ್, ಬಾಲಕೃಷ್ಣನ್, ಕೆ.ಬಿ.ಮುಹಮ್ಮದ್ ಕುಞÂ, ಕರೀಂ ಚೌಕಿ, ಪಿ.ಶೈನಿ, ಸಮೀರ ಫೈಸಲ್, ಅಬ್ದುಲ್ ರಹಮಾನ್ ಬಂದ್ಯೋಡು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಖ್ರಮಕ್ಕೆ ಮೊದಲು ಕಾಸರಗೋಡು ಸರ್ಕಾರಿ ಕಾಲೇಜು ವಠಾರದಿಂದ ಬೆಳಗ್ಗೆ 10ಕ್ಕೆ ಸಂತ್ರಸ್ತರ ಪೋಷಕರು, ತಾಯಂದಿರನ್ನೊಳಗೊಂಡ ಬೃಹತ್ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಯಿತು.




