ಕಾಸರಗೋಡು: ಪನತ್ತಡಿ ಅರಣ್ಯ ವಿಭಾಗದ ಪೆನ್ನಿಕ್ಕರ ಅರಣ್ಯ ಪ್ರದೇಶದಲ್ಲಿ ಬೇಟೆಯಲ್ಲಿ ನಿರತರಾಗಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ. ಪನತ್ತಡಿ ರಾಜಾಫುರ ಅಡ್ಕಂ ನಿವಾಸಿ ಕೆ. ಸತೀಶನ್, ಕೆ. ವಿನೀತ್, ಹಾಗೂ ಆರ್. ಶ್ರೀಜಿತ್ ಬಂಧಿತರು.ಇವರಿಣದ ಎರಡು ಬಂದೂಕು, ಮೂರು ಸಜೀವ ಮದ್ದುಗುಂಡು, ಎರಡು ಟಾರ್ಚ್‍ಲೈಟ್ ವಶಪಡಿಸಿಕೊಳ್ಳಲಾಗಿದೆ. ತಂಡದಲ್ಲಿದ್ದ ಇತರ ಮೂವರು ಓಡಿ ಪರರಿಯಾಗಿದ್ದಾರೆ.ಮಲೆನಾಡು ಪರದೇಶದಲ್ಲಿ ರಾತ್ರಿ ವೇಳೆ ವ್ಯಾಪಕ ಬೇಟೆ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪನತ್ತಡಿ ಅರಣ್ಯ ವಿಭಾಗಾಧಿಕಾರಿ ಬಿ.ಕೆ ಶೇಷಪ್ಪ ಅವರ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ.




