ಕಾಸರಗೋಡು : ನಗರಸಭಾ 18ನೇ ವಾರ್ಡ್ ಅಮೈ ವಾರ್ಡುಮಟ್ಟದ ಕುಟುಂಬಶ್ರೀ ಸಿ.ಡಿ.ಎನ್ ನೇತೃತ್ವದಲ್ಲಿ ಮಳೆ ಹಬ್ಬ ಅಮೈ ಬಯಲಲ್ಲಿ ಜರುಗಿತು. ನಗರಸಭೆ ಮತ್ತು ಸಿಡಿಎಸ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರಸಭಾ ಅಧ್ಯಕ್ಷ, ವಕೀಲ ವಿ.ಎಂ.ಮುನೀರ್ ಮಳೆ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಂದಿನ ತಲೆಮಾರಿಗೆ ಭತ್ತದ ಬಯಲು, ಬೇಸಾಯದ ಬಗ್ಗೆ ಅರಿವು ಮೂಡಿಸುವ ಮೂಲಕ ಕೃಷಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಪ್ರೇರಣೆ ನೀಡಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸಿಡಿಎಸ್ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಸಿಡಿಎಸ್ ಅಧ್ಯಕ್ಷೆ ಆಯೇಷಾ ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. . ನಗರಸಭಾ ಉಪಾಧ್ಯಕ್ಷೆ ಸಂಶೀದಾ ಫಿರೋಜ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ, ಕೌನ್ಸಿಲರ್‍ಗಳಾದ ಖಾಲಿದ್ ಪಚ್ಚಕ್ಕಾಡ್, ಸಿಯಾನ ಹನೀಫ್, ವಾರ್ಡ್ ಕೌನ್ಸಿಲರ್ ವಿಮಲಾ, ಲೆಕ್ಕಪರಿಶೋಧಕಿ ಸಜಿತಾ, ಸಿಒ ಅರ್ಚನಾ ಸಂಚಾಲಕರಾದ ದೇವಯಾನಿ, ಆಶಾ ಮತ್ತು ಸೆರೆನಾ ಕೃಷಿ ಅಧಿಕಾರಿಗಳು, ಸಿಡಿಎಸ್ ಸದಸ್ಯರು, ಕುಟುಂಬಶ್ರೀ ಸದಸ್ಯರು ಭಾಗವಹಿಸಿದ್ದರು. ಸಿಡಿಎಸ್ ಉಪಾಧ್ಯಕ್ಷೆ ಶಕೀಲಾ ಮಜೀದ್ ಸ್ವಾಗತಿಸಿದರು. ಸಂಚಾಲಕಿ ಶಾಹಿದಾ ಯೂಸುಫ್ ವಂದಿಸಿದರು.
ಮಳೆಹಬ್ಬ ಅಂಗವಾಗಿ ಮಹಿಳೆಯರಿಗೆ ಕೆಸರುಗದ್ದೆಯಲ್ಲಿ ಓಟದ ಸ್ಪರ್ಧೆ, ಲಿಂಬೆ ಚಮಚ ಓಟ ಸೇರಿದಂತೆ ನಾನಾ ಸ್ಪರ್ಧೆಗಳು ನಡೆಯಿತು.

