ಎರ್ನಾಕುಳಂ: ಎರಡು ದಿನಗಳ ಕಾಲ ರೈಲಿನಲ್ಲಿ ಟಿಕೆಟ್ ತೆಗೆದುಕೊಳ್ಳದೆ ವಾಶ್ ರೂಂನಲ್ಲಿ ತಲೆಮರೆಸಿಕೊಂಡಿದ್ದ ಯುವಕನನ್ನು ಬಂಧಿಸಲಾಗಿದೆ. ಎರ್ನಾಕುಳಂ ಎಕ್ಸ್‍ಪ್ರೆಸ್‍ನಲ್ಲಿ ಪ್ರಯಾಣಿಸುತ್ತಿದ್ದ ಜಾಖರ್ಂಡ್ ಮೂಲದ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ.
ಇದು ರಾಂಚಿಯಿಂದ ಎರ್ನಾಕುಳಂಗೆ ಸಂಚರಿಸುತ್ತಿದ್ದ ರೈಲಾಗಿತ್ತು. ಜಾರ್ಖಂಡ್ ನಲ್ಲಿ ರೈಲು ಹತ್ತಿ ಕೇರಳ ಪ್ರವೇಶಿಸಲು ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡಿನ ಅರಕ್ಕೋಣಂನಲ್ಲಿ ವಾಶ್ ರೂಂನ ಬಾಗಿಲು ಮುರಿದು ಆತನನ್ನು ಬಂಧಿಸಲಾಯಿತು.
ಶೌಚಾಲಯದಲ್ಲಿ ಅಡಗಿ ಕುಳಿತಿದ್ದರಿಂದ ತೆರೆಯಲು ಸಾಧ್ಯವಾಗದೆ ಪ್ರಯಾಣಿಕರು ಟಿಟಿಇಗೆ ದೂರು ನೀಡಿದ್ದರು. ಬಳಿಕ ರೈಲು ಸಿಬ್ಬಂದಿಗಳು ಆಗಮಿಸಿ ಬಾಗಿಲು ಒಡೆದರು. ಆತ ರೈಲಿನ ವಾಶ್ ರೂಂನಲ್ಲಿ ನೆಲದ ಮೇಲೆ ಕುಳಿತಿದ್ದ. ನಂತರ, ಆರೋಪಿಯನ್ನು ಆರ್‍ಪಿಎಫ್ ವಶಕ್ಕೆ ತೆಗೆದುಕೊಂಡರು.


