ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ಉಳ್ಳಾಲ್ತೀ ಮಹಿಳಾ ಸಂಘದ ವತಿಯಿಂದ 15ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ದೇವಸ್ಥಾನದಲ್ಲಿ ಜರುಗಿತು. ಸಾವಿರಕ್ಕೂ ಹೆಚ್ಚುಮಂದಿ ಮಹಿಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪೂಜೆ ಆರಂಭಗೊಂಡು, ಮಧ್ಯಾಹ್ನ ಮಹಾಪೂಜೆಯೊಂದಿಗೆ ಸಂಪನ್ನಗೊಂಡಿತು.
ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ದೇವಸ್ಥಾನದಲ್ಲಿ ಜರುಗಿತು. ಬೆಳಗ್ಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆಯೊಂದಿಗೆ ಮಧ್ಯಾಹ್ನ ಪೂಜಾ ಮಂಗಳಾರತಿ ನಡೆಯಿತು. ಮೀಯಪದವು ವಿಶ್ವಹಿಂದೂಪರಿಷತ್ ಮಾತ್ರಮಂಡಳಿ ವತಿಯಿಂದ ಮೀಯಪದವು ಶ್ರೀ ಅಯ್ಯಪ್ಪ ಭಜನಾಮಂದಿರ, ಬಡಗು ಶಬರಿಮಲೆ ಯಬ್ರಂಗಳ ಶ್ರೀ ಮಹಾದೇವ ಪಾರ್ವತೀ ಶ್ರೀಶಾಸ್ತಾರ ದೇವಸ್ಥಾನ, ನೆಕ್ರಾಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರ, ವಿಹಿಂಪ ಮಾತೃಶಕ್ತಿ ಬದಿಯಡ್ಕ ಪ್ರಖಂಡ ವತಿಯಿಂದ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ನಡೆಯಿತು.






