ಉಪ್ಪಳ: ಕೇಂದ್ರ ಸರ್ಕಾರದ ಯೋಜನೆಗಳು ನೇರವಾಗಿ ದೇಶದ ಸಾಮಾನ್ಯ ಜನತೆಯ ಖಾತೆಗೆ ಲಭಿಸುವ ಕಾರಣ ಯೋಜನೆಗಳೆಲ್ಲ ಜನಪ್ರಿಯವಾಗುತ್ತಿದೆ. ಮೋದಿ ವಿರೋಧಿಗಳು ಕೂಡ ಮೋದಿಜಿ ಯೋಜನೆಗಳ ಫಲಾನುಭವಿಗಳು ಎಂದು ಹೇಳಲು ಬಿಜೆಪಿ ಸಂತಸ ಪಡುತ್ತಿದೆ ಎಂದು ಸೀತಾರಾಮ ಬಾಯಾರು ಹೇಳಿದರು.
ಕೇಂದ್ರ ಯೋಜನೆಗಳ ಬಗ್ಗೆ ಬಿಜೆಪಿ ಪೈವಳಿಕೆಯಲ್ಲಿ ಸಂಘಟಿಸಿದ ಕಾರ್ಯಾಗಾರ ಮಾಹಿತಿ ಶಿಬಿರದಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು.
ಕೃಷಿ ಸಮ್ಮಾನ್ ಯೋಜನಾ, ಫಸಲ್ ಭೀಮ ಯೋಜನಾ, ಜನ್ ಧನ್, ಪೆನ್ಸನ್ ಸ್ಕಿಮ್ ಗಳು, ಜಲಜೀವನ್, ಆವಾಜ್ ಯೋಜನಾ, ಮುದ್ರ ಲೋನ್, ಕೈಗಾರಿಕಾ, ಕೌಶಲ್ಯ ಯೋಜನಾ, ವಿಶ್ವಕರ್ಮ ಯೋಜನಾ, ಜೀವನ್ ಜ್ಯೋತಿ, ಸುಕನ್ಯಾ ಯೋಜನಾ, ಮಾತೃ ವಂದನಾ ಹೀಗೆ 288 ಅಧಿಕ ಯೋಜನೆಗಳು ನೇರವಾಗಿ ಜನತೆಗೆ ಲಭಿಸುತ್ತಿದೆ. ಪಡಿತರ, ಚುಚ್ಚುಮದ್ದು ಮೊದಲಾದವುಗಳು ಕೇಂದ್ರ ದೇಶದ ಜನತೆಗೆ ನೀಡುವ ಯೋಜನೆಗಳು ಎಂದು ಅವರು ಈ ಸಂದರ್ಭ ಮಾಹಿತಿ ನೀಡಿದರು.
ವಾರ್ಡ್ ಸದಸ್ಯೆ ರಾಜೀವಿ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಆದರ್ಶ್ ಬಿಎಂ, ಪ್ರ.ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್, ಅಚ್ಚುತ್ತ ಚೇವಾರ್, ಮಹಾಲಿಂಗ ಭಟ್ ಉಪಸ್ಥಿತರಿದ್ದರು. ಗೋಪಾಲ ಕೃಷ್ಣ ಭಟ್ ಸ್ವಾಗತಿಸಿ, ವಂದಿಸಿದರು.




.jpg)
