ಕುಂಬಳೆ: ಕೃಷಿಯಲ್ಲಿ ಇಂದು ಆಧುನಿಕ ತಂತ್ರಜ್ಞಾನವು ಬಹಳಷ್ಟು ಬೆಳವಣಿಗೆಯನ್ನು ಕಂಡಿದೆ. ಕೃಷಿವಲಯದಲ್ಲಿ ವೈಜ್ಞಾನಿಕವಾಗಿ ಉಂಟಾದ ಹೊಸ ಸಂಶೋಧನೆಗಳನ್ನು ಅರಿಯಲು ಇಂತಹ ಸೆಮಿನಾರ್‍ಗಳು ಸಹಕಾರಿಯಾಗುತ್ತದೆ ಎಂದು ಕಾಸರಗೋಡು ಕೃಷಿಕರ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಹೇಳಿದರು.
ಸಂಘದ ಪೆರ್ಮುದೆ ಶಾಖೆಯ ನೇತೃತ್ವದಲ್ಲಿ ಪೆರ್ಮುದೆ ಪರಮೇಶ್ವರೀ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಕೃಷಿ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೊಬ್ಬರಗಳ ಉಪಯೋಗ, ಉಪಯೋಗ ಕ್ರಮಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು. ಪೈವಳಿಕೆ ಗ್ರಾಮಪಂಚಾಯಿತಿ ಸದಸ್ಯೆ ಇರ್ಷಾನ ಇಸ್ಮಾಯಿಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ವಿಟ್ಲ ಸಿಪಿಸಿಆರ್‍ಐ ಹಿರಿಯ ವಿಜ್ಞಾನಿ ಡಾ. ನಾಗರಾಜ ಯನ್ ಆರ್. ಅವರು ಮಾತನಾಡಿ ಅಡಿಕೆ ಕೃಷಿಗೆ ಯಾವರೀತಿಯ ಗೊಬ್ಬರಗಳನ್ನು ಬಳಕೆಮಾಡಬೇಕು? ಹೇಗೆ ಮಾಡಬೇಕು ಎಂಬುದಾಗಿ ಮಾಹಿತಿಯನ್ನು ನೀಡಿದರು. ಸಿಪಿಸಿಆರ್‍ಐ ವಿಟ್ಲದ ವಿಜ್ಞಾನಿ ಡಾ. ಸುಚಿತ್ರ ಮಾಹಿತಿಯನ್ನು ನೀಡಿದರು. ಪೈವಳಿಕೆ ಗ್ರಾಮಪಂಚಾಯಿತಿ ಸಹಾಯಕ ಕೃಷಿ ಅಧಿಕಾರಿ ವಿನೋದ ಪಿ.ವಿ., ಅಂಗಡಿಮೊಗರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎ. ರಾಮ ಭಟ್, ಶಾಲಾ ಮುಖ್ಯೋಪಾಧ್ಯಾಯ ಸದಾಶಿವ ಕೆ.ಕೆ. ಪಾಲ್ಗೊಂಡಿದ್ದರು. ಕಾರ್ಯದರ್ಶಿ ಅಪ್ಪಣ್ಣ ಬಿ.ಎಸ್. ಸ್ವಾಗತಿಸಿ, ಪೆರ್ಮುದೆ ಶಾಖಾ ಪ್ರಬಂಧಕ ಕೃಷ್ಣ ಪಿ. ವಂದಿಸಿದರು. ನಿರ್ದೇಶಕಿ ಸ್ಮಿತಾ ಸರಳಿ ಪ್ರಾರ್ಥನೆ ಹಾಡಿದರು.




.jpg)
