ಮುಳ್ಳೇರಿಯ: ಸದಭಿರುಚಿ ಪ್ರಕಾಶನ ಸಂಸ್ಥೆಯ ಸಂಚಾಲಕ ಶಂಕರ್ ಕುಳಮರ್ವ ಇವರು ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇವರಿಗೆ ಮಂಗಳೂರಿನ ಕುಳಾಯಿಯಲ್ಲಿರುವ ಶ್ರೀ ಮಧುಕರ ಭಾಗವತ್ ಅವರ ಕೊಡುಗೆಯಾದ ‘ರಾಘವಾಯಣ’ ಎಂಬ ರಾಘವರಾವ್ ಸಂಸ್ಮರಣಾ ಗ್ರಂಥದ ಪ್ರತಿಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಶಂಕರ್ ಕುಳಮರ್ವ ಇವರನ್ನು ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಭಟ್ ಕೆ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಭಟ್ ಅಡ್ಕ, ಗೋವಿಂದ ಬಳ್ಳಮೂಲೆ ಸಾಂದರ್ಭಿಕ ಮಾತುಗಳನ್ನಾಡಿದರು. ಕೃಷ್ಣ ಭಟ್ ಅಡ್ಕ, ವಿಜಯಲಕ್ಷ್ಮಿ ಸ್ಕಂದ ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಳಿ ಸ್ಕಂದ ಸ್ವಾಗತಿಸಿ, ಡಾ ಶಿವಕುಮಾರ್ ಅಡ್ಕ ವಂದಿಸಿದರು.




.jpg)
