ಮುಳ್ಳೇರಿಯ: ಪೆರಿಯ ಗೋಕುಲಂ ಗೋಶಾಲೆಯಲ್ಲಿ ದೇಶದ ಸ್ವಾತಂತ್ರ್ಯ ದಿನಾಚರಣೆಯ ಸಂದಭರ್ದಲ್ಲಿ ಖ್ಯಾತ ಸಂಗೀತಗಾರ್ತಿ ಕೃತಿ ಭಟ್ ಚೆನ್ನೈ ಅವರಿಂದ ಸಂಗೀತ ಕಛೇರಿ ನಡೆಯಿತು.
ಚಾರುಕೇಶಿಯಲ್ಲಿ ವರ್ಣದಿಂದ ಆರಂಭವಾಗಿ ಹಂಸಧ್ವನಿ ಹಾಗೂ ಖಾಮಸ್ ರಾಗದಲ್ಲಿ ಜಯತಿ ಜಯತಿ ಭಾರತ ಮಾತೆಯ ಗೀತೆಗೆ ಮಲ್ಲಾಡಿ ಸಹೋದರರು ರಾಗಂ ತಾನಂ ಪಲ್ಲವಿಯಾಗಿ ಸ್ವಾತಂತ್ರ್ಯೋತ್ಸವದ ವಿಶೇಷ ಸಾಹಿತ್ಯವನ್ನು ಹಾಡಿದಾಗ ಕಲಾಪ್ರೇಮಿಗಳು ದನಿಗೂಡಿಸಿದರು. ಗಾಂಧೀಜಿಯವರ ಅಚ್ಚುಮೆಚ್ಚಿನ ಭಜನ್ ‘ವೈಷ್ಣವ ಜನತೋ’ ಮತ್ತು ‘ಮೈತ್ರಿಂ ಭಜತಾ’ ಮುಂತಾದ ಭಜನೆಗಳನ್ನು ಹಾಡಿದರು. ಗೋಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಭಾಗವಹಿಸಿದ್ದ ಘಟಂ ಮಾಂತ್ರಿಕ ಕಾರ್ತಿಕ್ ಚೆನ್ನೈ ತನ್ನ ವಿಶೇಷ ಶೈಲಿಯ ಮೂಲಕ ನೆರೆದವರ ಮನಗೆದ್ದರು. ಪಿಟೀಲಿನಲ್ಲಿ ತಿರುವನಂತಪುರ ಸಂಪತ್, ಮೃದಂಗದಲ್ಲಿ ಗಣಪತಿ ರಾಮನ್ ಚೆನ್ನೈ ಮತ್ತು ಕಂಜೀರದಲ್ಲಿ ಪಯ್ಯನ್ನೂರು ಗೋವಿಂದಪ್ರಸಾದ್ ಜೊತೆಗೂಡಿದರು.




.jpeg)
