HEALTH TIPS

ಹರಿಯಾಣ ಗಲಭೆ: ಇಂಟರ್‌ನೆಟ್‌ ಸೇವೆ ಸ್ಥಗಿತ, ಕಟ್ಟಡ ನೆಲಸಮ ಮುಂದುವರಿಕೆ

              ಚಂಡೀಗಢ: ಹರಿಯಾಣಾದ ನೂಹ್‌ನಲ್ಲಿ ಕೋಮುಗಲಭೆ ಮುಂದುವರೆದಿದ್ದು, ಆಗಸ್ಟ್‌8ರವರೆಗೆ ಇಂಟರ್‌ನೆಟ್‌. ಎಸ್‌ಎಂಎಸ್‌ ಸೇವೆಯ ಸ್ಥಗಿತವನ್ನು ಮುಂದುವರೆಸಿ ಸರ್ಕಾರ ಆದೇಶ ಹೊರಡಿಸಿದೆ.

             ಪಲ್‌ವಾಲಾ ಜಿಲ್ಲೆಯಲ್ಲಿ ಆಗಸ್ಟ್‌ 7ರ ಸಂಜೆ 5 ಗಂಟೆವರೆಗೆ ನಿರ್ಬಂಧ ಇರಲಿದೆ ಎಂದೂ ಹೇಳಿದೆ.

               'ಕಾನೂನು-ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರ ಮತ್ತು ಉದ್ವಿಗ್ನವಾಗಿವೆ ಎಂದು ನೂಹ್ ಉಪ ಆಯುಕ್ತರು ನನ್ನ ಗಮನಕ್ಕೆ ತಂದಿದ್ದಾರೆ, ಹೀಗಾಗಿ ಶಾಂತಿ ಮತ್ತು ಸಾರ್ವಜನಿಕರ ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ತಡೆಯಲು ಈ ಆದೇಶ ಹೊರಡಿಸಲಾಗಿದೆ' ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌.ಎನ್‌ ಪ್ರಸಾದ್‌ ಹೇಳಿದ್ದಾರೆ.

           ಅಕ್ರಮ ಕಟ್ಟಡ ಎಂದು ಹೆಸರಿಸಿ ಈಗಾಗಲೇ ಹಲವು ಕಟ್ಟಡಗಳನ್ನು ಜಿಲ್ಲೆಯಲ್ಲಿ ನೆಲಸಮಗೊಳಿಸಲಾಗಿದ್ದು, ನಾಲ್ಕನೇ ದಿನವಾದ ಭಾನವಾರವೂ ಮುಂದುವರೆದಿದೆ.

               ಮೆಡಿಕಲ್ ಸ್ಟೋರ್‌ಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 50 ರಿಂದ 60 ಕಟ್ಟಡಗಳನ್ನು ಇದುವರೆಗೆ ಕೆಡವಲಾಗಿದೆ. ಬಂಧನಕ್ಕೆ ಹೆದರಿ ಹಲವು ಮಂದಿ ಸ್ಥಳೀಯರು ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

                    ಈ ನಡುವೆ ನೂಹ್‌ನ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೇಲಿನ ದಾಳಿಯು ಈ ವರ್ಷದ ಆರಂಭದಲ್ಲಿ ಪತ್ತೆಯಾದ ಬೃಹತ್ ವಂಚನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸುವ ಗುರಿಯನ್ನು ಹೊಂದಿತ್ತು ಎಂದು ಹರಿಯಾಣ ಸರ್ಕಾರ ಶನಿವಾರ ಹೇಳಿದೆ.

               ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆ ವೇಳೆ ಆರಂಭವಾದ ಕೋಮುಗಲಭೆ ತೀವ್ರ ಹಿಂಸಾಚಾರ ರೂಪಕ್ಕೆ ತಿರುಗಿದ್ದು ಘರ್ಷಣೆಯಲ್ಲಿ ಈವರೆಗೆ ಆರು ಜನರು ಮೃತಪಟ್ಟಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries