ಬದಿಯಡ್ಕ: ಜಿಲ್ಲಾ ಮಾಹಿತಿ ಕೇಂದ್ರ, ಕಾಸರಗೋಡು ರೋಟರಿ ಕ್ಲಬ್ ಕಾಸರಗೋಡು ರೋಟರಿ ಭವನದಲ್ಲಿ ಆಯೋಜಿಸಿದ ದೇಶಭಕ್ತಿಗಾನ, ದೇಶೀಯ ಗಾನ ಸ್ಪರ್ಧೆಗಳಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲಾಧಿಕಾರಿ ಕೆ.ಇನ್ಬಶೇಖರ್ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಗೌತಂ ಭಕ್ತ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಹಿತಿ ಕೇಂದ್ರ ಅಧಿಕಾರಿ ಎಂ.ಮಧುಸೂದನನ್, ಸಿಐ ವಿಶಾಲ್ ಕುಮಾರ್ ಮಾತನಾಡಿದರು. ಎಂ.ಕೆ.ರಾಧಾಕೃಷ್ಣನ್ ಸ್ವಾಗತಿಸಿ, ನಿಹಾಲ್ ಜೋಯ್ ವಂದಿಸಿದರು. ಸ್ಪರ್ಧೆಯಲ್ಲಿ ಪರವನಡ್ಕ ಮೋಡಲ್ ರೆಸಿಡೆನ್ಸಿ ಶಾಲೆ ದ್ವಿತೀಯ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯ ಮೂರನೇ ಸ್ಥಾನ ಪಡೆದುಕೊಂಡಿದೆ. ಒಟ್ಟು 18 ತಂಡಗಳು ಭಾಗವಹಿಸಿವೆ.




.jpg)
