ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ ರಾಮಾಯಣ ಕಥಾಮೃತ ಕಾರ್ಯಕ್ರಮ ಆಚರಿಸಲಾಯಿತು.
ಶಾಲಾ ಹಳೆವಿದ್ಯಾರ್ಥಿ ಅಶ್ವಿನಿ ರಮಣ ಭÀಟ್ ತುಪ್ಪದ ದೀಪ ಬೆಳಗಿಸಿ ದಿನಪೂರ್ತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳು ಭಜನ ರಾಮಾಯಣದ ಗೀತೆಯನ್ನು ಹಾಡಿದರು. ಮಧ್ಯಾಹ್ನದ ತನಕ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾರ್ಥಿಗಳಿಗೆ ರಾಮಾಯಣ ಕಥೆಯ ಬಗ್ಗೆ ಅರಿವು ಮೂಡಿಸುವ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಇದೇ ಸಂದಭರ್Àದಲ್ಲಿ ಶ್ರೀರಾಮಚಂದ್ರಾಪುರ ಮಠದಿಂದ ಅನಾವರಣಗೊಳ್ಳುತ್ತಿರುವ ಭಾವ ರಾಮಾಯಣ ಪುಸ್ತಕ ಸಂಚಿಕೆಗಳನ್ನಾಧರಿಸಿ ಪರೀಕ್ಷೆಯನ್ನು ನಡೆಸಲಾಯಿತು. ಅಪರಾಹ್ನ ವಿದ್ಯಾರ್ಥಿಗಳಿಂದ ರಾಮಾಯಣ ಕಾವ್ಯವಾಚನ ನಡೆಯಿತು. ಒಂದು ತಿಂಗಳ ಪರ್ಯಂತ ಕುಂಬಳೆ ಸೀಮೆಯ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಪರ್ಯಟನೆಯ ಮೂಲಕ ರಾಮಾಯಣ ಮಾಸಾಚರಣೆಯನ್ನು ಅರ್ಥವತ್ತಾಗಿ ಪ್ರವಚನಗೈಯುತ್ತಿರುವ ಕೀರ್ತನ ಪ್ರವೀಣ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ಸಾರ್ವಜನಿಕವಾಗಿ ಕಥಾಪ್ರವಚನವನ್ನು ನಡೆಸಿಕೊಟ್ಟರು. ರಾಮತಾರಕ ಮಂತ್ರವನ್ನು ಸಾಂಘಿಕವಾಗಿ ಪಠಿಸಲಾಯಿತು.




.jpg)
