ಮುಳ್ಳೇರಿಯ: ಕಾಸರಗೋಡು ಜಿಲ್ಲಾ ಕ್ವಿಜ್ ಅಸೋಸಿಯೇಶನ್ ಮತ್ತು ಲಯನ್ಸ್ ಕ್ಲಬ್ ಆಫ್ ಮುಳ್ಳೇರಿಯ ಹಾಗೂ ಕಯ್ಯಾರ ಕಿಞ್ಞಣ್ಣರೈ ವಾಚನಾಲಯ-ಗ್ರಂಥಾಲಯ ಸಂಯುಕ್ತ ಆಶ್ರಯದಲ್ಲಿ ಅಂಬಿಳಿ ಮಾಮನ ಜೊತೆಗೆ ಬಹಿರಾಕಾಶ ಎಂಬ ವಿಷಯದ ಆಧಾರದಲ್ಲಿ ಜಿಲ್ಲಾ ಕ್ವಿಜ್ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರೇಮಚಂದ್ರ ಮಾಸ್ತರ್ ಪಿಲಿಕ್ಕೋಡ್ ಕ್ವಿಜ್ ನಿಯಂತ್ರಿಸಿದರು. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ದಿಯಾಲಕ್ಷ್ಮಿ ಎಂ., ಹೃದಯ ಕೆ ಎಂ ವೆಳ್ಳಿಕ್ಕೋತ್(ಪ್ರಥಮ), ಅದ್ವ್ಯೆತ್ ಕೆ.ಎಸ್. ಮುಳ್ಳೇರಿಯ, ಆರೋಮಲ್ ಟಿ.ವಿ. ಉದಿನೂರ್(ದ್ವಿತೀಯ), ಸ್ನೇಹಲ್ ಎ ಕೆ ಚೆಮ್ಮನಾಡ್, ಸಾನ್ವಿಯ ಜಿ ನಾಯರ್ ಬಾವಿಕ್ಕೆರೆ(ತೃತೀಯ) ಬಹುಮಾನ ಪಡೆದರು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಅಶ್ವಿನ್ ರಾಜ್ ನೀಲೇಶ್ವರ, ಶಿವದ್ ಕೂಕ್ಕಲ್ ಚಾಲಿಂಗಲ್(ದ್ವಿತೀಯ), ಹರಿಗೋವಿಂದ್ ಸಿ ನೀಲೇಶ್ವರ, ಶ್ರೀನಂದ್ ಎಸ್ ನಾಯರ್ ಪುಂಗಚ್ಚಾಲ್, ತನವ್ ಇ. ಪಾಕ್ಕಮ್ (ತೃತೀಯ) ಸ್ಥಾನ ಪಡೆದರು.
ಹೈಸ್ಕೂಲ್ ವಿಭಾಗದಲ್ಲಿ ಅಭಿರಾಜ್ ಎಂ ಪೇರೂರ್, ಅರ್ಜುನ್ ಎ ಕೆ ಚೆಮ್ಮನಾಡ್(ಪ್ರಥಮ), ದೇವಿಕೃಷ್ಣ ಚಾತ್ತಂ, ಅಗ್ರಿಮ ಟಿ.ವಿ. ಉದಿನೂರ್(ದ್ವಿತೀಯ), ಸ್ನೇಹ ಸಿ ಎಸ್ ಮುಂಡಕ್ಕೈ, ನಂಗೋಪಾಲ್ ಸಿ ವಿದ್ಯಾನಗರ(ತೃತೀಯ) ಬಹುಮಾನ ಪಡೆದರು. ಸಾರ್ವಜನಿಕ ವಿಭಾಗದಲ್ಲಿ ಸುಧೀಶ್ ಮಡಿಕೈ, ಶ್ರುತಿಲಯ ಪುತ್ತುಕೈ(ಪ್ರಥಮ), ಅಭಿನವ್ ಬೋವಿಕ್ಕಾನ, ನಿತ್ಯಮಧು ಮೀಂಗೋತ್(ದ್ವಿತೀಯ), ಮಾಯಾ ಎನ್ ನೆಚ್ಚಿಪಡ್ಪು, ರಜನಿ ಟಿ ಪಾಂಡಿ(ತೃತೀಯ) ಬಹುಮಾನ ಪಡೆದರು.
ಮುಳ್ಳೇರಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಇ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಐ. ಜನಾರ್ದನನ್ ಉದ್ಘಾಟಿಸಿದರು. ಎಂ ಸಾವಿತ್ರಿ, ಶಿವದ ಕೂಕ್ಕಲ್ ಶುಭಹಾರೈಸಿದರು. ಆದೂರು ಠಾಣಾಧಿಕಾರಿ ವಿನೋದ್ ಕುಮಾರ್ ಬಹುಮಾನ ವಿತರಿಸಿದರು. ವಿ ತಂಬಾನ್ ಮಾಸ್ತರ್, ಶಾಫಿ ಚೂರಿಪಳ್ಳ, ಟಿ.ವಿ. ವಿಜಯನ್ ಮಾಸ್ತರ್, ಚಂದ್ರ ಮೊಟ್ಟಮ್ಮಲ್ ಮಾತನಾಡಿದರು. ಕ್ವಿಜ್ ಅಸೋಸಿಯೇಶನ್ ಜಿಲ್ಲಾ ಜೊತೆ ಕಾರ್ಯದರ್ಶಿ ಕೆ. ಮೋಹನನ್ ಮಾಸ್ತರ್ ಸ್ವಾಗತಿಸಿ, ಕೆ. ವಿಜಿತ್ ವಂದಿಸಿದರು.




.jpg)
