ತಿರುವನಂತಪುರಂ: ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿರುವ ಕೇರಳದಲ್ಲಿ ಮನೆಯಲ್ಲಿನ ಬಾವಿಯಿಂದ ಇಂಧನ ಸಿಗಬಹುದೇ? ಲಾಭದಾಯಕ ವಿಷಯವಾದರೂ ಕುಡಿಯುವ ನೀರಿಗೆ ತತ್ವಾರ ಉಂಟಾಗುವುದು ನಿಶ್ಚಿತ.
ಕುಡಿವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ವೆಂಜರಮೂಡಿನ ಸುಕುಮಾರನ್ ಮತ್ತು ಅವರ ಕುಟುಂಬಕ್ಕೆ.
ಸುಕುಮಾರನ್ ಹಿತ್ತಲಿನಲ್ಲಿದ್ದ ಬಾವಿಯಿಂದ ಲೀಟರ್ ಗಟ್ಟಲೆ ಪೆಟ್ರೋಲ್ ತೆಗೆದಿದ್ದಾರೆ. ಎರಡು ವಾರಗಳಿಂದ ಕೊಳವೆಬಾವಿಯ ನೀರಿನಲ್ಲಿ ವಿಭಿನ್ನ ರುಚಿಯನ್ನು ಅನುಭವಿಸಿದ ಮನೆಯವರು ಕುಡಿಯಲು ನಲ್ಲಿಯ ನೀರನ್ನೇ ಅವಲಂಬಿಸುತ್ತಿದ್ದರು. ಎರಡು ದಿನಗಳ ಹಿಂದೆ ಬಾವಿಯಿಂದ ಪೆಟ್ರೋಲ್ ವಾಸನೆ ಬರಲಾರಂಭಿಸಿದಾಗ ನೀರನ್ನು ಪರಿಶೀಲಿಸಿದಾಗ ಬಣ್ಣದಲ್ಲಿ ವ್ಯತ್ಯಾಸ ಕಂಡು ಬಂದಿತ್ತು ಎಂದು ಸುಕುಮಾರನ್ ಹೇಳಿದ್ದಾರೆ.
ಮನೆಯ ಎದುರುಗಡೆಯಿಂದ 300 ಮೀಟರ್ ದೂರದಲ್ಲಿ ಪೆಟ್ರೋಲ್ ಪಂಪ್ ಇದೆ. ನಿನ್ನೆ ಪಂಪ್ ಅಧಿಕಾರಿಗಳು ಮನೆಗೆ ಬಂದು ಬಾವಿ ಮುಚ್ಚಿದ್ದು, ಕುಟುಂಬಕ್ಕೆ ಶುದ್ಧ ನೀರು ತರಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಬಾವಿಗೆ ಪೆಟ್ರೋಲ್ ಹೇಗೆ ಬಂತು ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.





