HEALTH TIPS

ಸಿರಿಬಾಗಿಲು ಪ್ರತಿಷ್ಠಾನದಲ್ಲಿ ರಾಮಾಯಣ ಮಾಸಾಚರಣೆ

            ಮಧೂರು: ಸಾಂಸ್ಕøತಿಕ ಕ್ಷೇತ್ರದಲ್ಲಿ ಹಲವು ಚಟುವಟಿಕೆಗಳ ಮೂಲಕ ಜನಪ್ರಿಯವಾಗಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಆ. 11 ರಿಂದ 17 ರ ವರೆಗೆ ರಾಮಾಯಣ ಮಾಸಾಚರಣೆ ಪ್ರಯುಕ್ತ ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ರಾಮಾಯಣ ಕೃತಿಯ ಯಕ್ಷಗಾನ ತಾಳಮದ್ದಳೆ, ಸಂಜೆ 6 ರಿಂದ ಭಜನೆ, 7 ರಿಂದ ಪ್ರವಚನ- ರಾಮನಾಮ ಜಪಯಜ್ನ ನಡೆಯಲಿದೆ. ಪ್ರತಿದಿನ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ಪ್ರವಚನ ನಡೆಯಲಿದೆ. 11 ರಂದು ಹಾಗು 17 ರಂದು ಪ್ರಸಿದ್ದ ಕಲಾವಿದರಿಂದ, ಹಾಗು ಇತರ ದಿನಗಳಲ್ಲಿ ಸಂಘ ಸಂಸ್ಥೆಗಳ ತಾಳಮದ್ದಳೆ ನಡೆಯಲಿರುವುದು. 

     ಆ.11 ರಂದು ಮಧ್ಯಾಹ್ನ 2.30 ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ತೀರ್ಥಹಳ್ಳಿ ತಾಲೂಕು ಹಾದಿಗಲ್ಲು ಶ್ರೀ ಅಭಯಲಕ್ಷ್ಮೀನೃಸಿಂಹ ದೇವಸ್ಥಾನದ ಧರ್ಮದರ್ಶಿ ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ ಚಾಲನೆ ನೀಡುವರು. ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ಡಾ.ಶಿವರಾಮ ಶೆಟ್ಟಿ ತಲ್ಲೂರು ಅಧ್ಯಕ್ಷತೆ ವಹಿಸುವರು. ಅಭ್ಯಾಗತರಾಗಿ ಅನನ್ಯ ಪೀಡ್ಸ್ ನಿರ್ದೇಶಕ ದಿವಾಣ ಗೋವಿಂದ ಭಟ್, ಕಲಾಪೋಷಕ ಅವಿನಾಶ್ ರಾವ್ ಬರಂಗಾಯಿ ಉಪಸ್ಥಿತರಿರುವರು. ಬಳಿಕ ಪ್ರಸಿದ್ದ ಕಲಾವಿದರಿಂದ ಪಾರ್ತಿಸುಬ್ಬ ವಿರಚಿತ ಪಟ್ಟಾಭಿಷೇಕ ಆಖ್ಯಾಯಿಕೆಯ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ರಮೇಶ್ ಭಟ್ ಪುತ್ತೂರು(ಭಾಗವತರು), ಚೆಂಡೆ- ಮದ್ದಲೆಗಳಲ್ಲಿ ಮುರಾರಿ ಕಡಂಬಳಿತ್ತಾಯ, ಲಕ್ಷ್ಮೀಶ ಬೆಂಗ್ರೋಡಿ ಮುನ್ನಡೆಸುವರು. ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್(ದಶರಥ), ಹರೀಶ್ ಬಳಂತಿಮೊಗರು(ಕೈಕೆಯಿ), ವೈಕುಂಠ ಹೇರ್ಳೆ ಸಾಸ್ತಾನ(ಮಂಥರೆ), ಡಾ.ಶ್ರುತಕೀರ್ತಿರಾಜ್(ಶ್ರೀರಾಮ), ಲಕ್ಷ್ಮಣ ಕುಮಾರ್ ಮರಕಡ(ಲಕ್ಷ್ಮಣ) ಪಾತ್ರಧಾರಿಗಳಾಗಿರುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries