ಕುಂಬಳೆ: ಪ್ರಧಾನಿ ಮೋದಿಯವರು ಬಿಜೆಪಿ ಕಾರ್ಯಕರ್ತರಿಗೆ ನೀಡುತ್ತಿರುವ ಮಾರ್ಗದರ್ಶನವನ್ನು ಸಾಕಾರಗೊಳಿಸಲು ಸಮಯ ಸನ್ನಿಹಿತವಾಗಿದೆ. ಮೋದಿಜಿಯವರು ನೀಡುತ್ತಿರುವ ಸಲಹೆ ‘ಮೇರಾ ಬೂತ್ ಸಬಸ್ಸೇ ಮಜಬೂತ್’ ಎಂಬುದು ಕಾರ್ಯಕರ್ತರು ತಮ್ಮ ತಮ್ಮ ಬೂತುಗಳನ್ನು ಸದೃಢಗೊಳಿಸಲು ಪ್ರತಿಜ್ಞಾ ಬದ್ಧರಾಗಬೇಕು. ಪ್ರತಿ-ಮನೆಗೆ ತೆರಳಿ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಲುಪಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ ಸುಧಾಮ ಗೋಸಾಡ ಹೇಳಿದರು.
ಬಿಜೆಪಿ ಕುಂಬಳೆ ಮಂಡಲ ಪುತ್ತಿಗೆ ಪಂಚಾಯತಿ ಬೂತ್ 168 ನೇ ಬೂತ್ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಬೂತ್ ಅಧ್ಯಕ್ಷ ಕೇಶವ ಭಟ್ ಗುಂಡಿತಾರು ಅಧ್ಯಕ್ಷತೆ ವಹಿಸಿದರು. ಮಂಡಲ ಕಾರ್ಯದರ್ಶಿ ಸ್ವಾಗತ್ ಸೀತಾಂಗೋಳಿ, ಕಾರ್ಯದರ್ಶಿ ಗಂಗಾಧರ ನಾಯ್ಕ್, ಸುರೇಶ ಕೇದ್ರೋಳಿ, ಅತುಲ್ ಕೃಷ್ಣ, ಶ್ರೀಧರ ಕಲ್ಲಡ್ಕ, ಪುರುಷೋತಮ ದೇರಡ್ಕ, ಸದಾಶಿವ ನಾಯ್ಕ ದೇರಡ್ಕ, ಹರೀನಾಥ್ ಶೆಟ್ಟಿ ಅಲ್ಚಾರ್, ವಿನೋದ್ ಮಂಜೊಟ್ಟಿ ಮೊದಲಾದವರು ಬೂತ್ ದರ್ಶನ್ ಯಾತ್ರೆಯಲ್ಲಿ ಭಾಗವಹಿಸಿದ್ದರು.

.jpg)
