ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಭಾನುವಾರ ಅಪರಾಹ್ನ ಶ್ರೀಮಠದ ಸಾಂಸ್ಕøತಿಕ ವೇದಿಕೆಯಲ್ಲಿ ಯಕ್ಷಬಳಗ ಹೊಸಂಗಡಿ ಮಂಜೇಶ್ವರ ತಂಡದವರಿಂದ 33ನೇ ವರ್ಷದ ಆಷಾಢ ಮಾಸದ ತಾಳಮದ್ದಳೆ ಅಭಿಯಾನದ ಭಾಗವಾಗಿ ಅ|ಂಗದ ಸಂಧಾನ ಆಖ್ಯಾಯಿಕೆಯ ತಾಳಮದ್ದಳೆ ಕೂಟ ನಡೆಯಿತು.
ಹಿಮ್ಮೇಳದಲ್ಲಿ ರತ್ನಾಕರ ಆಳ್ವ ತಲಪಾಡಿ, ಚೈತನ್ಯಕೃಷ್ಣ(ಭಾಗವತಿಕೆ), ಶುಭಶರಣ ತಾಳ್ತಜೆ, ಶ್ರುತಕಿರಣ ತಾಳ್ತಜೆ, ರಾಜಾರಾಮ ಬಲ್ಲಾಳ್ ಚಿಪ್ಪಾರು(ಚೆಂಡೆ-ಮೃದಂಗ)ದಲ್ಲಿ ಹಾಗೂ ಮುಮ್ಮೇಳದಲ್ಲಿ ಸಂಕಬೈಲು ಸತೀಶ ಅಡಪ, ವಿಠಲ ಭಟ್ ಮೊಗಸಾಲೆ, ರಾಮಕೃಷ್ಣ ಭಟ್ ಪೆರ್ವಡಿ, ಹರಿಶ್ಚಂದ್ರ ನಾಯ್ಗ ಮಾಡೂರು ಭಾಗವಹಿಸಿದ್ದರು.

.jpg)
.jpg)
