ಮುಳ್ಳೇರಿಯ: ಮಲಯಾಳಂ ಭಾಷೆ ಮತ್ತು ಲಿಪಿ ತುಳು ಭಾಷೆಯಿಂದಲೇ ಹುಟ್ಟಿಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಖ್ಯಾತ ಭಾಷಾ ಸಂಶೋಧಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯ ಡಾ.ಎ.ಎಂ.ಶ್ರೀಧರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಳಿಯಾರ್ ಗ್ರಾಮ ಪಂಚಾಯತಿ ಮತ್ತು ಕಸ್ತೂರುಬಾ ಗಾಂಧಿ ಸ್ಮಾರಕ ಗ್ರಂಥಾಲಯ ಮತ್ತು ವಾಚನಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ಗ್ರಾಮಲೋಕ ಸಾಹಿತ್ಯ ಚರ್ಚಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಲಯಾಳಂ ಲಿಪಿ ಮತ್ತು ತುಳು ಲಿಪಿಗಳ ಮಧ್ಯೆ ನಿಕಟ ಸಾಮ್ಯತೆಯಿದ್ದು ತುಳುವಿನಲ್ಲಿ ಹಲವು ಪದಗಳು ಮಲಯಾಳಂ ಭಾಷೆಯನ್ನೇ ಹೋಲುತ್ತವೆ ಎಂದು ಅವರು ಬೊಟ್ಟುಮಾಡಿದರು.
ಕಾರ್ಯಕ್ರಮವನ್ನು ಪಂಚಾಯಿತಿ ಅಧ್ಯಕ್ಷೆ ಪಿ.ವಿ. ಮಿನಿ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಜನಾರ್ದನನ್, ರೈಸಾ ರಶೀದ್, ಅಬ್ಬಾಸ್ ಕೊಳಚೆಪ್ಪು, ಅನನ್ಯ ಎಂ., ಶ್ಯಾಮಲಾ ಎ., ಪಿ.ರವೀಂದ್ರನ್, ಸಿ.ನಾರಾಯಣಿಕುಟ್ಟಿ. ವಿ., ಸತ್ಯವತಿ, ರಮೇಶ ಮೂಡಲಪಾರ, ನಬೀಸಾ ಪಿ.ಎ, ಖೈರುನ್ನೀಸಾ, ಡಾ.ಕೆ.ವಿ.ಸಜೀವನ್, ಡಾ.ಮಂಜುಳಾ ಪಿ., ವಿ.ವಿ. ಪ್ರಭಾಕರ, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.




.jpg)
