ಕುಂಬಳೆ: ಪುತ್ತಿಗೆ ಮಹಿಮ್ಮಾತ್ ಹೈಯರ್ ಸೆಕೆಂಡರಿ ಶಾಲೆಯ ಐಟಿ ಗಣಿತ ಮತ್ತು ವಿಜ್ಞಾನ ಸಂಘಗಳ ಉದ್ಘಾಟನೆಯನ್ನು ಕಾಸರಗೋಡು ಹೈಯರ್ ಎಂಡ್ ರೆಸ್ಕ್ಯೂ ಅಸಿಸ್ಟೆಂಟ್ ಸ್ಟೇಷನ್ ಅಧಿಕಾರಿ ಸಂತೋಷ ಕುಮಾರ್. ಟಿ ನೆರವೇರಿಸಿದರು. ಬಳಿಕ ಅಗ್ನಿ ದುರಂತ ಮತ್ತು ನೀರಿನಲ್ಲಿ ಉಂಟಾಗುವ ಅಫಘಾತಗಳು ಮುಂತಾದ ಸಂಧರ್ಭದಲ್ಲಿ ಹೇಗೆ ರಕ್ಷಣಾ ಕಾರ್ಯ ಕೈಗೊಳ್ಳಬಹುದು ಎಂದು ತರಬೇತಿ ನೀಡಿದರು.
ಮುಖ್ಯೋಪಾಧ್ಯಾಯ ಅಬ್ದುಲ್ ಖಾದರ್, ಪ್ರಾಂಶುಪಾಲ ರೂಪೇಶ್.ಎಂ.ಟಿ, ನೌಕರ ಸಂಘದ ಕಾರ್ಯದರ್ಶಿ ಅಬ್ದುಲ್ ಅಝೀಝ್ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಅಧ್ಯಾಪಿಕೆಯರಾದ ರೈಹಾನಾ, ಅನ್ನಾಮರಿಯಾ, ಮಂಜುಳಾ ಮಾತಾಡಿದರು.




.jpg)
