ಕಾಸರಗೋಡು: ಶಾಲಾ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಮುಂದಿಟ್ಟುಕೊಂಡು ಟಿಪ್ಪರ್ ಲಾರಿಗಳ ಮತ್ತು ಟಿಪ್ಪಿಂಗ್ ಮೆಕ್ಯಾನಿಸಂವನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿರುವ ವಾಹನಗಳ ಸಂಚಾರವನ್ನು ಬೆಳಗ್ಗೆ ಒಂಭತ್ತು ಗಂಟೆಯಿಂದ ಹತ್ತು ಗಂಟೆ ತನಕ ಮತ್ತು ಸಂಜೆ ನಾಲ್ಕರಿಂದ ಐದರ ತನಕ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸುವ ವಾಹನಗಳ ವಿರುದ್ಧ ಕಠಿಣ ಕ್ರಮಗಳನ್ನು ಸ್ವೀಕರಿಸಲು ಪೆÇಲೀಸ್, ಮೋಟಾರ್ ವಾಹನ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ರಸ್ತೆ ಭದ್ರತಾ ಕೌನ್ಸಿಲ್ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ.

.jpeg)
