ಕಾಸರಗೋಡು: ಬೋವಿಕ್ಕಾನ ಪೊವ್ವಲ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಕಾಸರಗೋಡು ಲಾಲ್‍ಬಹದ್ದೂರ್ ಶಾಸ್ತ್ರಿ(ಎಲ್‍ಬಿಎಸ್)ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ ಅಭಿವೃದ್ಧಿಪಡಿಸಿದ ಇಲೆಕ್ಟ್ರಿಕಲ್ ಉಳುಮೆ ಯಂತ್ರ(ಎಲೆಕ್ಟ್ರಿಕ್ ಟಿಲ್ಲರ್)ವನ್ನು ಕಾಲೇಜು ವಠಾರದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಉದುಮ ಶಾಸಕ ಸಿ.ಎಚ್.ಕುಞಂಬು ಉಳುಮೆ ಯಂತ್ರವನ್ನು ಚಲನೆ ಮಾಡುವ ಮೂಲಕ ಉದ್ಘಾಟಿಸಿದರು. ಕೇರಳದ ಬರ್ಥಥಧ ಗದ್ದೆಗಳಿಗೆ ಅತ್ಯಂತ ಸೂಕ್ತವಾದ ಹಾಗೂ ಶಕ್ತಿಶಾಲಿ ಎಲೆಕ್ಟ್ರಿಕ್ ಟಿಲ್ಲರ್ ಇದಾಗಿದೆ. ಒಂದುಬಾರಿ ಚಾರ್ಜ್ ನಡೆಸಿದಲ್ಲಿ ಮೂರು ಗಂಟೆಗಳ ಕಾಲ ನಿರಂತರವಾಗಿ ಕೆಲಸ ನಿರ್ವಹಿಸುವ ಶಕ್ತಿ ಹೊಂದಿದೆ. ಸಲಕರಣೆಯು 750 ವ್ಯಾಟ್ ಮೋಟಾರ್ ಮತ್ತು ನಾಲ್ಕು ಬ್ಯಾಟರಿಗಳನ್ನು ಒಳಗೊಂಡಿದೆ. ಪೆಟ್ರೋಲ್ ಯಾ ಡೀಸೆಲ್ ಟಿಲ್ಲರ್‍ಗಳಿಗೆ ಹೋಲಿಸಿದಲ್ಲಿ ಎಲೆಕ್ಟ್ರಿಕ್ ಟಿಲ್ಲರ್‍ಗಳು ನಿರ್ವಹಣಾ ವೆಚ್ಚದ ಹತ್ತನೇ ಒಂದು ಭಾಗವನ್ನು ಮಾತ್ರ ಹೊಂದಿರುತ್ತವೆ.
ಪೆÇ್ರ.ಎ.ವಿ.ಬೇಬಿ ಸಿಂಧು, ಪೆÇ್ರ.ವಿ.ಶೀಜಾ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಾದ ಟಿ.ಎ.ನಿತಿನ್, ಕೆ.ಟಿ.ಅಶ್ವಿನ್, ಕೆ.ಪಿ.ಮಹಮ್ಮದ್ ಹುಸೇರ್, ಯು.ವಿಘ್ನೇಶ್, ಕೆ.ಜೆ.ಕಾರ್ತಿಕ್, ಎಂ.ವೈಶಾಖ್, ಕೆ.ವಿ.ವಿಷ್ಣುಪ್ರಸಾದ್ ಅವರು 'ಹಾರ್ವೆಸ್ಟ್ ಹೋಲರ್'ಎಂಬ ಇಲೆಕ್ಟ್ರಿಕ್ ಉಳುಮೆ ಯಂತ್ರವನ್ನು ಆವಿಷ್ಕರಿಸಿದ್ದಾರೆ. ಕೇರಳ ತಾಂತ್ರಿಕ ವಿಶ್ವವಿದ್ಯಾಲಯದಿಂದ ಸಿಇಆರ್‍ಡಿ ನಿಧಿಯನ್ನು ಪಡೆದು ಯೋಜನೆಯನ್ನು ಪೂರ್ತಿಗೊಳಿಸಲಾಗಿದೆ. ಮಾಲಿನ್ಯ ಮುಕ್ತ ಮತ್ತು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರುವ ಟಿಲ್ಲರ್ ಕೃಷಿಕರ ಪಾಲಿಗೆ ಬಲು ದೊಡ್ಡ ಆಸ್ತಿಯಾಗಲಿದೆ ಎಂಬುದಾಗಿ ಅಭಿಪ್ರಾಯಪಡಲಾಗಿದೆ. ಸಮಾರಂಭದಲ್ಲಿ ಕಾಲೇಜು ಪ್ರಾಂಶುಪಾಲ ಡಾ.ಮಹಮ್ಮದ್ ಶುಕೂರ್ ಅಧ್ಯಕ್ಷತೆ ವಹಿಸಿದ್ದರು. ಪಿಟಿಎ ಕಾರ್ಯದರ್ಶಿ ಸಿ.ವಿ.ಕೃಷ್ಣನ್, ಉಪಾಧ್ಯಕ್ಷ ಮುಜೀಬ್ ಮಂಗಾಟ್, ಆಡಳಿತಾಧಿಕಾರಿ ಕೆ.ಜಯಚಂದ್ರನ್ ಉಪಸ್ಥಿತರಿದ್ದರು.. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‍ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ಜಯಕುಮಾರ್ ಸ್ವಾಗತಿಸಿದರು. ಪ್ರಾಧ್ಯಾಪಕ ಎ.ವಿ. ಬೇಬಿ ಸಿಂಧು ವಂದಿಸಿದರು.


