ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಎರಡು ದಿನಗಳಲ್ಲಿ ಮುಗಿಯಲಿದೆ. ಆದರೆ, ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಬಗ್ಗೆ ಚರ್ಚೆ ನಡೆಸುವ ಸಂಬಂಧ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ತಳೆದಿರುವ ಬಿಗಿಪಟ್ಟು ಇನ್ನೂ ಸಡಿಲವಾಗಿಲ್ಲ.
0
samarasasudhi
ಆಗಸ್ಟ್ 10, 2023
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಎರಡು ದಿನಗಳಲ್ಲಿ ಮುಗಿಯಲಿದೆ. ಆದರೆ, ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಬಗ್ಗೆ ಚರ್ಚೆ ನಡೆಸುವ ಸಂಬಂಧ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ತಳೆದಿರುವ ಬಿಗಿಪಟ್ಟು ಇನ್ನೂ ಸಡಿಲವಾಗಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ಮೇಲ್ಮನೆಯ ಸದನಕ್ಕೆ ಬರಲು ಮತ್ತು ತಮ್ಮ ನೇತೃತ್ವದಲ್ಲಿ ಆದಷ್ಟು ಶೀಘ್ರ ಮಣಿಪುರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯುವ ಘೋಷಣೆ ಮಾಡಲು ಸಿದ್ಧರಿದ್ದರೆ, ಈ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಬೇಕೆಂದು ರಾಜ್ಯಸಭೆಯಲ್ಲಿ ಇಟ್ಟಿರುವ ಬೇಡಿಕೆಯನ್ನು ಕೈಬಿಡಬಹುದು ಎಂದು ವಿರೋಧ ಪಕ್ಷದ ನಾಯಕರು ಹೇಳಿದರು.
ಮೇಲ್ಮನೆಯು ಬುಧವಾರ ಪ್ರತಿಪಕ್ಷಗಳ ಈ ಬೇಡಿಕೆಗಳಿಗೆ ಸಾಕ್ಷಿಯಾಯಿತು. ಆದರೆ, ಕಳೆದ ವಾರ ಚರ್ಚಿಸಿದ ಮಧ್ಯಮ ಮಾರ್ಗಕ್ಕೆ ಎರಡೂ ಕಡೆಯವರು ಒಟ್ಟಿಗೆ ಬರಲು ಸಾಧ್ಯವಾಗದ ಕಾರಣ ಈ ವಿಚಾರದಲ್ಲಿ ಯಾವುದೇ ಪ್ರಗತಿ ಕಾಣಿಸಲಿಲ್ಲ.
'ಈ ಸ್ಥಿತಿಗೆ ಸರ್ಕಾರವೇ ಹೊಣೆ. ಜುಲೈ 20ರಿಂದ ಪ್ರಧಾನಿ ಸಂಸತ್ತಿನಿಂದ ದೂರ ಉಳಿದಿದ್ದು, ಬುಧವಾರದವರೆಗೂ ಅವರು ರಾಜ್ಯಸಭೆಗೆ ಬಂದಿರಲಿಲ್ಲ. ಅವಿಶ್ವಾಸ ನಿರ್ಣಯವನ್ನು ಸಲ್ಲಿಸುವ ಮೂಲಕ ಮಣಿಪುರ ವಿಷಯದ ಬಗ್ಗೆ ಮಾತನಾಡುವಂತೆ ನಾವು ಅವರನ್ನು ಒತ್ತಾಯಿಸಬೇಕಾಯಿತು' ಎಂದು ರಾಜ್ಯಸಭಾ ಸದಸ್ಯ, ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಯಾನ್ ಹೇಳಿದ್ದಾರೆ.
'ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮಾತನಾಡುವಂತೆ ವಿರೋಧಪಕ್ಷಗಳು ಅವಿಶ್ವಾಸ ನಿರ್ಣಯ ಸಲ್ಲಿಸಬೇಕಾಗಿರುವುದು ದಯನೀಯ ಸ್ಥಿತಿ' ಎಂದೂ ಅವರು ಹೇಳಿದರು.