HEALTH TIPS

ರಕ್ಷಾ ಬಂಧನ: ಯೋಧರಿಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು

                     ಮ್ಮು (PTI): ಜಮ್ಮು ಪ್ರದೇಶದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ನಿಯೋಜನೆಗೊಂಡಿರುವ ಸೇನೆ ಮತ್ತು ಅರೆ ಸೇನಾ ಪಡೆಗಳ ಯೋಧರಿಗೆ ರಕ್ಷಾ ಬಂಧನದ ಅಂಗವಾಗಿ ಬುಧವಾರ ಮಹಿಳೆಯರು ಮತ್ತು ಶಾಲಾ ವಿದ್ಯಾರ್ಥಿನಿಯರು ರಾಖಿ ಕಟ್ಟಿ ಶುಭ ಹಾರೈಸಿದರು.

                ಸಾಂಬಾ, ಜಮ್ಮು, ರಜೌರಿ ಮತ್ತು ಉಧಂಪುರ ಜಿಲ್ಲೆಗಳಲ್ಲಿರುವ ಭದ್ರತಾ ‍ಪಡೆಗಳ ಶಿಬಿರಗಳಲ್ಲಿ ರಾಖಿ ಕಟ್ಟುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

                'ಯೋಧರು ತಮ್ಮ ಮನೆ, ಬಂಧುಗಳಿಂದ ದೂರವಿದ್ದು, ದೇಶದ ರಕ್ಷಣೆಗಾಗಿ ಗಡಿಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಅವರಿಗೆ ರಾಖಿ ಕಟ್ಟುವುದು ಸಹೋದರಿಯರಾದ ನಮ್ಮ ಕರ್ತವ್ಯ' ಎಂದು ವಿದ್ಯಾರ್ಥಿನಿ ಸುನಿತಾ ದೇವಿ ತಿಳಿಸಿದ್ದಾರೆ.

                  ಜಮ್ಮುವಿನ ಅಂತರರಾಷ್ಟ್ರೀಯ ಗಡಿಯ ಆರ್‌.ಎಸ್‌. ಪುರ ವಲಯದಲ್ಲಿರುವ ಯೋಧರಿಗೆ ಸೇವಾ ಭಾರತಿ ಅಧೀನದಲ್ಲಿರುವ ಶಾಲೆಯ ವಿದ್ಯಾರ್ಥಿನಿಯರು ರಾಖಿ ಕಟ್ಟಿದರು. ಉಧಂಪುರದಲ್ಲಿ ಸಿಆರ್‌ಪಿಎಫ್‌ ಯೋಧರಿಗೆ ರಾಖಿ ಕಟ್ಟಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries