ಕಾಸರಗೋಡು: ಲೀಗಲ್ ಹಯರ್ ಸರ್ಟಿಫಿಕೇಟ್‍ಗಾಗಿ ಲಂಚ ಸ್ವೀಕರಿಸಿದ ಚಿತ್ತಾರಿ ಗ್ರಾಮಾಧಿಕಾರಿ ಮತ್ತು ಸಹಾಯಕನನ್ನು ವಿಜಿಲೆನ್ಸ್ ಅಧಿಕಾರಿಗಳ ತಂಡ ಬಂಧಿಸಿದೆ. ಚಿತ್ತಾರಿ ಗ್ರಾಮಾಧಿಕಾರಿ ವೆಳ್ಳಚ್ಚಾಲ್ ಚೆರುವಾಂಚೇರಿ ನಿವಾಸಿ ಸಿ. ಅರುಣ್ ಹಾಗೂ ವಿಲ್ಲೇಜ್ ಸಹಾಯಕ ಪಿಲಿಕ್ಕೋಡ್ ವರಕ್ಕೋಟ್ ನಿವಾಸಿ ಕೆ.ವಿ ಸಉಧಾಕರನ್ ಎಂಬವರನ್ನು 3ಸಾವಿರ ರೂ. ಲಂಚ ಸ್ವೀಕರಿಸುವ ಮಧ್ಯೆ ವಿಜಿಲೆನ್ಸ್ ಡಿವೈಎಸ್‍ಪಿ ವಿ.ಕೆ ವಿಶ್ವಂಭರನ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಚಿತ್ತಾರಿ ಚಾಮುಂಡಿಕುನ್ನು ನಿವಾಸಿ ಅಬ್ದುಲ್ ಬಶೀರ್ ಎಂಬವರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಅಬ್ದುಲ್ ಬಶೀರ್ ಅವರ ಸಹೋದರಿಯ ಗಂಡನ ಜಾಗ ಖರೀದಿ ಬಗ್ಗೆ ಅಗ್ರಿಮೆಂಟ್ ನಡೆಸಿದ್ದು, ಇದಕ್ಕೆ ಸಂಬಂಧಿಸಿ ಲೀಗಲ್ ಹಯರ್ ಸರ್ಟಿಫಿಕೇಟ್ ತೆಗೆಯಬೇಕಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಾಧಿಕಾರಿ ಹಾಗೂ ವಿಲ್ಲೇಜ್ ಅಸಿಸ್ಟೆಂಟ್ 3ಸಾವಿರ ರೂ. ಲಂಚದ ಬೇಡಿಕೆಯೊಡ್ಡಿದ್ದರು.



