ಕಾಸರಗೋಡು: ವಿಶ್ವ ಛಾಯಾಗ್ರಹಣದಿನಾಚರಣೆ ಅಂಗವಾಗಿ ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ಕಾಸರಗೋಡು ವೆಸ್ಟ್ ಯೂನಿಟ್ ವತಿಯಿಂದ ಎ.ಕೆ.ಪಿ.ಎ ಸ್ಥಾಪಕ ಪ್ರಧಾನಕಾರ್ಯದರ್ಶಿ ಎಸ್. ಸಾರಂಗಪಾಣಿ ಅವರ ಸಂಸ್ಮರಣಾ ಕಾರ್ಯಕ್ರಮ ಕಾಸರಗೋಡು ಕೊ-ಓಪರೇಟಿವ್ ಟೌನ್ ಬ್ಯಾಂಕಿನ ಸಭಾಂಗಣದಲ್ಲಿ ಜರುಗಿತು.
ಎ.ಕೆ.ಪಿ.ಎ.ಜಿಲ್ಲಾಅಧ್ಯಕ್ಷ ಕೆ.ಸಿ.ಅಬ್ರಹಾಂ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾಸರಗೋಡಿನ ಖ್ಯಾತ ಕಲಾವಿದ ಗಣಪತಿವಿಗ್ರಹ ರಚನಾ ಶಿಲ್ಪಿ ಲಕ್ಷ್ಮೀಶ ಆಚಾರ್ಯ ಹಾಗೂ ಫೊಟೋಗ್ರಾಫಿ-ವಿಡಿಯೋಗ್ರಫಿ ಕ್ಷೇತ್ರದಲ್ಲಿ 25ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ನಿರ್ವಹಿಸುತ್ತಿರುವ ವೆಸ್ಟ್‍ಯೂನಿಟಿನ ಸದಸ್ಯರನ್ನು ಅಭಿನಂದಿಸುವ ಕಾರ್ಯಕ್ರಮ ಜರುಗಿತು. ಯೂನಿಟ್ ಅಧ್ಯಕ್ಷ ರತೀಶ್ ರಾಮುವಿಡಿಯೋ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ನಾರಾಯಣನ್.ಟಿ, ಮೈಂದಪ್ಪ. ಕೆ.ಎಂ,ಕೃಷ್ಣ ಎಲ್ಲೋರ, ಉಮ್ಮರ್ ನಿಸಾರ್, ಜಯಪ್ರಕಾಶ್.ಕೆ, ವಾಸು.ಎ, ಚಂದ್ರಶೇಖರ.ಎಂ, ಶ್ರೀಧರ್ ನಡಕ್ಕಾಲ್, ರಾಜೇಶ್ ಕುಮಾರ್.ಕೆ, ರಹ್‍ಮಾನ್ ಚೆಮ್ನಾಡ್,ಸುಬ್ರಹ್ಮಣ್ಯ.ಎಂ.ಎಸ್, ಮನೋಜ್ ಕುಮಾರ್. ಎ.ಟಿ, ಉದಯ ಕುಮಾರ್. ಕೆ, ಹೇಮಂತ್ ಕುಮಾರ್. ಬಿ, ಅನಿಲ್ ಕುಮಾರ್, ವಸಂತ್ ಕೆರೆಮನೆ ಇವರನ್ನು ಶಾಲು ಹೊದಿಸಿ ಸ್ಮರಣಿಕೆನೀಡಿ ಗೌರವಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯಾ ಜಿಲ್ಲಾ ಕೋಶಾಧಿಕಾರಿ ವೇಣು.ವಿ.ವಿ, ಜಿಲ್ಲಾಉಪಾಧ್ಯಕ್ಷ ವಿಜಯನ್.ಕೆ ನಾಯರ್, ಜಿಲ್ಲಾ ನೇಚರ್ ಕ್ಲಬ್‍ಕೋರ್ಡಿನೇಟರ್ ದಿನೇಶ್ ಇನ್‍ಸೈಟ್ ಜಿಲ್ಲಾ ಸಮಿತಿ ಸದಸ್ಯ ಮೈಂದಪ್ಪ, ಜಿಲ್ಲಾ ವೆಲ್ಫೇರ್ ಸಬ್‍ಕೋರ್ಡಿನೇಟರ್ ಸಂಜೀವ ರೈ, ಎ.ಕೆ.ಪಿ.ಎ ವಲಯ ಅಧ್ಯಕ್ಷರಾದ ವಾಸು.ಎ, ವಲಯಕಾರ್ಯದರ್ಶಿ ಚಂದ್ರಶೇಖರ.ಎಂ, ಯೂನಿಟ್ ಉಪಾಧ್ಯಕ್ಷಗಣೇಶ್ ರೈ, ಜತೆಕಾರ್ಯದರ್ಶಿ ವಿಶಾಖ್, ಕೋಶಾಧಿಕಾರಿ ಅಮಿತ್ ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ಪ್ರಾಸಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಜತೆರ್ಯದರ್ಶಿ ವಿಶಾಖ್ ವಂದಿಸಿದರು.


