ಮುಳ್ಳೇರಿಯ: ಕೋಟೂರು ಕಾರ್ತಿಕೇಯ ಕಿರಿಯ ಪ್ರಾಥಮಿಕ ಶಾಲೆಯ ವಜ್ರಮಹೋತ್ಸವ ಆಚರಣೆಯ ಅಂಗವಾಗಿ ಸಮಾರಂಭದ ಉದ್ಘಾಟನೆ ಬುಧವಾರ ಸಂಪನ್ನವಾಯಿತು. ಶಾಸಕ ಸಿ.ಯಚ್. ಕುಂಞಂಬು ಉದ್ಘಾಟಿಸಿ ಶುಭ ಹಾರೈಸಿದರು. ಮುಳಿಯಾರ್ ಗ್ರಾ.ಪಂ.ಅಧ್ಯಕ್ಷೆ ಮಿನಿ ಪಿ.ವಿ. ಅಧ್ಯಕ್ಷತೆ ವಹಿಸಿದ್ದರು.
ಮುಳಿಯಾರ್ ಗ್ರಾ.ಪಂ, ಉಪಾಧ್ಯಕ್ಷ ಎ. ಜನಾರ್ದನನ್, ಪಂಚಾಯತಿ ಸದಸ್ಯರುಗಳಾದ ರೈಸ ರಶೀದ್, ಶ್ಯಾಮಲಾ, ಪಿ. ರವೀಂದ್ರನ್, ಅನನ್ಯಾ ಎ, ನಾರಾಯಣಿ ಕುಟ್ಟಿ, ಸತ್ಯವತಿ, ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾಡ್ ಮೊಂಥೆರೋ, ಆಡಳಿತ ಸಮಿತಿ ಅಧ್ಯಕ್ಷ ಎ. ಗೋಪಾಲನ್ ಮಣಿಯಾಣಿ, ಆಡಳಿತ ಸಮಿತಿ ಕಾರ್ಯದರ್ಶಿ ಕೇಳು ಮಾಸ್ತರ್, ಖಾಲಿದ್ ಬೆಳ್ಳಿಪ್ಪಾಡಿ, ಎಂ. ಮಾಧವನ್, ಪಿ.ಕುಂಞÂಕಣ್ಣನ್ ನಾಯರ್, ವಿ. ಕುಂಞÂರಾಮನ್, ಬಾಲಕೃಷ್ಣನ್, ಶಿವಶಂಕರನ್, ಕೆ. ಗೋಪಾಲನ್, ಅಚ್ಯುತನ್ ಸಿ, ಇವರು ಶುಭಾಶಂಸನೆದರು. ಪಿ. ಬಾಲಕೃಷ್ಣನ್ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಸುಕುಮಾರಿ ಕೆ.ಎಂ ವಂದಿಸಿದರು.

.jpg)
.jpg)
