ಉಪ್ಪಳ: ಬುಧವಾರ ಸಂಜೆ 6.04ಕ್ಕೆ ನಮ್ಮ ದೇಶದ ಹೆಮ್ಮೆ ಪಡುವ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಜುಲೈ 14, 2023ರಂದು ಉಡ್ಡಯನಗೊಳಿಸಿದ ಅಂತರಿಕ್ಷವಾಹಕ “ವಿಕ್ರಮ” ಚಂದ್ರಲೋಕದ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದದ್ದು ಇಡೀ ದೇಶವೇ ಹೆಮ್ಮೆ ಪಡುವಂತಹದು, ಈ ಸಾಧನೆ ಮಾಡಿದ ವಿಜ್ಞಾನಿಗಳು ಅಭಿನಂದನಾರ್ಹರು ಎಂದು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ವಿಜ್ಞಾನಿಗಳು ಇನ್ನಷ್ಟು ಸಾಧನೆ ಮಾಡಲು ಭಗವಂತನು ಅನುಗ್ರಹಿಸಲಿ ಎಂದು ಶ್ರೀಗಳು ಹಾರೈಸಿದ್ದಾರೆ.

