ಬದಿಯಡ್ಕ: ಬೆಂಗಳೂರು ವಿಶ್ವವಿದ್ಯಾನಿಲಯ ನಡೆಸಿದ್ದ 2022ನೇ ಸಾಲಿನ ಶಿಕ್ಷಕ ಪದವಿ ತರಬೇತಿ (ಬಿ.ಎಡ್) ಪರೀಕ್ಷೆಯಲ್ಲಿ ಸಂಸ್ಕøತ ವಿಭಾಗದಲ್ಲಿ ಕಾಸರಗೋಡು ನೀರ್ಚಾಲು ಪುದುಕೋಳಿಯ ಅಕ್ಷತ ಭಟ್ ಉನ್ನತ ಶ್ರೇಣಿಯಲ್ಲಿ(83 ಶೇ.) ತೇರ್ಗಡೆಯಾಗಿದ್ದಾರೆ. ಕಟೀಲು ಶ್ರೀದುರ್ಗಾಪರಮೇಶ್ವರಿ ಕಾಲೇಜಿನಲ್ಲಿ ಸಂಸ್ಕøತ ಎಂ.ಎ. ಪದವಿ ಪಡೆದಿರುವ ಇವರು ಪತ್ರಕರ್ತ ಪುರುಷೋತ್ತಮ ಭಟ್ ಅವರ ಪತ್ನಿಯಾಗಿದ್ದು, ಮಂಜೇಶ್ವರದ ಗಿರಿಧರ ಭಟ್-ಲಕ್ಷ್ಮೀ ಭಟ್ ದಂಪತಿಗಳ ಪುತ್ರಿಯಾಗಿದ್ದಾರೆ. ಮೈಸೂರು ಸಂಸ್ಕøತ ಪಾಠಶಾಲೆಯಲ್ಲಿ ವಿದ್ವತ್ ವ್ಯಾಕರ ಪೂರ್ವ ಅಧ್ಯಯನವನ್ನೂ ನಡೆಸಿರುವ ಇವರು ಪ್ರಸ್ತುತ ಸರ್ಕಾರಿ ಹೈಸ್ಕೂಲು ಪೈವಳಿಕೆ ಕಾಯರ್ಕಟ್ಟೆ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕಿಯಾಗಿದ್ದಾರೆ.




.jpg)
