ಬದಿಯಡ್ಕ: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಸಿರಿಗನ್ನಡ ವೇದಿಕೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ "ಗಮಕ ಶ್ರಾವಣ" ಕಾರ್ಯಕ್ರಮ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಮಂಗಳವಾರ ಜರುಗಿತು. ಶ್ರೀಕೃಷ್ಣ ಭಟ್ ಪುದುಕೋಳಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಶಿವಶಂಕರ ಭಟ್ ಗುಣಾಜೆ ಪಾಲ್ಗೊಂಡಿದ್ದರು. ತೆಕ್ಕೇಕರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ನಿವೃತ್ತ ಅಧ್ಯಾಪಕ ವಿ.ಬಿ. ಕುಳಮರ್ವ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತೊರವೆ ರಾಮಾಯಣದಿಂದ ಆಯ್ದ ಭಾಗವನ್ನು ಪಿಲಿಂಗಲ್ಲು ಕೃಷ್ಣ ಭಟ್ ಬದಿಯಡ್ಕ ವಾಚಿಸಿದರು. ಡಾ. ಬೇ. ಸೀ. ಗೋಪಾಲಕೃಷ್ಣ ವ್ಯಾಖ್ಯಾನಿಸಿದರು. ರಮೇಶ ಕಳೇರಿ ಸ್ವಾಗತಿಸಿ, ಗಣಪತಿ ಪ್ರಸಾದ ಕುಳಮರ್ವ ವಂದಿಸಿದರು.

.jpg)
