ಕಾಸರಗೋಡು: ಶಾಲೆ ಬಿಟ್ಟು ಮನೆಯ ಸಮೀಪ ವಾಹನದಿಂದ ಇಳಿದ ನರ್ಸರಿ ತರಗತಿ ವಿದ್ಯಾರ್ಥಿನಿಗೆ ಅದೇ ಶಾಲಾ ಬಸ್ ಡಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟ ಘಟನೆ ಕಂಬಾರು ಶಿರಿಬಾಗಿಲಲ್ಲಿ ನಡೆದಿದೆ. ಇಲ್ಲಿನ ಪೆರಿಯಡ್ಕ ಮರ್‍ಹಬಾ ಹೌಸ್‍ನ ಮೊಹಮ್ಮದ್ ಝುಬೈರ್ ಅವರ ಪುತ್ರಿ ಆಯಿಷಾ ಸೋಯಾ(4ವರ್ಷ)ಮೃತಪಟ್ಟ ಬಾಲಕಿ.
ಆಯೇಶಾ ಕಾಸರಗೋಡು ನೆಲ್ಲಿಕುನ್ನು ತಙಳ್ ಉಪ್ಪಾಪ ನರ್ಸರಿ ಶಾಲೆಯ ವಿದ್ಯಾರ್ಥಿನಿ. ಗುರುವಾರ ಮಧ್ಯಾಹ್ನ ಶಾಲೆ ಬಿಟ್ಟ ನಂತರ ಬಸ್ಸಿನಿಂದ ಮನೆ ಬಳಿ ಇಳಿಸಲಾಗಿತ್ತು. ಬಸ್ ಹಿಂದುಗಡೆ ಚಲಿಸಿದಾಗ ಅದೇ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸಮೀಪದ ಕೈಗಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಅಪಘಾತ ದೃಶ್ಯ ಕಂಡು ಧಾವಿಸಿಬಂದು ಮಗುವನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ.





