ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬದಿಯಡ್ಕ ಸಂಸ್ಕøತಿ ಭವನದಲ್ಲಿ ದಿ.ರವಿಕಾಂತ ಕೇಸರಿ ವೇದಿಕೆಯಲ್ಲಿ ಜರಗಿತು. ಜಿಲ್ಲಾ ಅಧ್ಯಕ್ಷ ಚಂದಪ್ಪ ಕಕ್ವೆ ಅಧ್ಯಕ್ಷತೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಶಂಕರ ದರ್ಬೆತಡ್ಕ ಉದ್ಘಾಟಿಸಿದರು.
ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಪದ್ಮನಾಭ ಇಂಜಿನಿಯರ್ ಚೇನೆಕೋಡ್, ಮದರು ಮಹಾಮಾತೆ ಅಧ್ಯಕ್ಷ ವಸಂತ ಅಜಕ್ಕೋಡು ವಿದ್ಯಾರ್ಥಿನಿಯರಿಗೆ ಪುರಸ್ಕಾರ ನೀಡಿ ಅಭಿನಂದಿಸಿದರು. 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ದೀಕ್ಷಶ್ರೀ ಹಾಗು ಧನ್ಯಶ್ರೀ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಡಿಯಂಯಸ್ ಅಧ್ಯಕ್ಷ ಚಂದ್ರಶೇಖರ ಪುತ್ತಿಗೆ, ಗ್ರಾಮ ಪಂಚಾಯಿತಿ ಸದಸ್ಯ ಕೇಶವ, ಜಿಲ್ಲಾ ಸದಸ್ಯ ಅಂಗಾರ ಅಜಕೋಡ್, ಜಿಲ್ಲಾ ಕೋಶಾಧಿಕಾರಿ ಹರಿಶ್ಚಂದ್ರ ಪುತ್ತಿಗೆ, ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ರಾಮ ಪಟ್ಟಾಜೆ, ಬದಿಯಡ್ಕ ಪಂಚಾಯಿತಿ ಪರಿಶಿಷ್ಟ ಜಾತಿ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ ಗೊಳಿಯಡ್ಕ, ಜಿಲ್ಲಾ ಸದಸ್ಯ ಗೋಪಾಲ ಡಿ, ಸುಂದರ ಬಾರಡ್ಕ, ರವಿ ಕನಕಪಾಡಿ, ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಾಬು ಬಂದ್ಯೋಡು, ಮದರು ಮಹಾಮತೆ ಗೌರವಾಧ್ಯಕ್ಷ ಆನಂದ ಮವ್ವಾರ್ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಸುಂದರ ಸುದೆಂಬಳ ನಿರೂಪಿಸಿದರು. ಸುಧಾಕರ ಬೆಳ್ಳಿಗೆ ಸ್ವಾಗತಿಸಿ, ಕಾರ್ಯದರ್ಶಿ ರವಿ ಕನಟ್ಟಿಪಾರೆ ವಂದಿಸಿದರು.




.jpg)
