ತ್ರಿಶೂರ್: ಗುರುವಾಯೂರಪ್ಪನಿÀಗೆ ಮಾರುತಿಯ ಇತ್ತೀಚಿನ ಮಾದರಿಯ ಇಕೋ ಸೆವೆನ್ ಸೀಟರ್ ಕಾಣಿಕೆಯಾಗಿ ಸಮರ್ಪಿಸಲಾಗಿದೆ. ಬೆಂಗಳೂರಿನ ಐಟಿ ಸಂಸ್ಥೆ ಸಿಕ್ಸ್ ಡಿ ಮಾಲೀಕ ಅಭಿಲಾಷ್ ಅವರು ವಾಹನವನ್ನು ಭಗವಂತನಿಗೆ ಸಮರ್ಪಿಸಿದರು.
ದೇವಸ್ಥಾನದ ಸತ್ರಂ ಗೇಟ್ ಬಳಿ ನಡೆದ ಸಮಾರಂಭದಲ್ಲಿ ದೇವಸ್ವಂ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬ್ರಹ್ಮಶ್ರೀ ಮಲ್ಲಿಸ್ಸೇರಿ ಪರಮೇಶ್ವರನ್ ನಂಬೂದಿರಿಪಾಡ್ ಅವರು ವಾಹನವನ್ನು ಸ್ವೀಕರಿಸಿದರು. ವಾಹನದ ಮಾರುಕಟ್ಟೆ ಮೌಲ್ಯ ರೂ.6 ಲಕ್ಷ.
ಏತನ್ಮಧ್ಯೆ, ಆಗಸ್ಟ್ ತಿಂಗಳ ಗುರುವಾಯೂರು ದೇವಸ್ಥಾನದ ನಿಧಿಯ ಎಣಿಕೆ ಪೂರ್ಣಗೊಂಡಾಗ, 5.89 ಕೋಟಿ ರೂ. ಸಂಗ್ರಹವಾಗಿದೆ. ಜೊತೆಗೆ 2 ಕೆಜಿ 977 ಗ್ರಾಂ 100 ಮಿಗ್ರಾಂ ಚಿನ್ನವನ್ನು ಸಹ ಕಾಣಿಕೆ ರೂಪದಲ್ಲಿ ಲಭಿಸಿದೆ. 21 ಕೆಜಿ 640 ಗ್ರಾಂ ಬೆಳ್ಳಿ ಕೂಡಾ ಕಾಣಿಕೆಯಾಗಿ ಸಂಗ್ರಹವಾಗಿದೆ.





