ಆಲಪ್ಪುಳ; ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪುನ್ನಮಾಡಕಯಲ್ ನಲ್ಲಿ ನೆಹರು ಟ್ರೋಫಿ ಬೋಟ್ ರೇಸ್ ಉದ್ಘಾಟಿಸಲು ಸಾಧ್ಯವಾಗಲಿಲ್ಲ.
ಭಾರೀ ಮಳೆಯಿಂದಾದ ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಹೆಲಿಪ್ಯಾಡ್‍ನಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಮುಖ್ಯಮಂತ್ರಿಯವರೊಂದಿಗೆ ಕಾಪ್ಟರ್ ವಾಪಸ್ ತೆರಳಿತು
ನಂತರ ಸಂಸ್ಕøತಿ ಸಚಿವ ಸಾಜಿ ಚೆರಿಯನ್ ಜಲಮೇಳವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಸಾಜಿ ಚೆರಿಯನ್ ಅವರಲ್ಲದೆ ನಾಲ್ವರು ಸಚಿವರು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಭಾಗವಹಿಸಿದ್ದರು.
ಈ ವರ್ಷ ಬೋಟ್ ರೇಸ್ ನಲ್ಲಿ 72 ಬೋಟ್ ಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿವೆ. ಚುಂಡನ್ ವಿಭಾಗವೊಂದರಲ್ಲೇ ಒಟ್ಟು 19 ದೋಣಿಗಳಿವೆ. ಇತರ ವಿಭಾಗಗಳಲ್ಲಿ ಸ್ಪರ್ಧಿಸುವ ದೋಣಿಗಳ ಸಂಖ್ಯೆ: ಚುರ್ಲನ್-3, ಟೇಕುರಕುತಿ ಎ-4, ಟೇಕುರುಕುತಿ ಬಿ-15, ಟೇಕುರುಕುತಿ ಸಿ-13, ವೆಪ್ ಎ- 7, ವೆಪ್ ಬಿ-4, ತೆಕ್ಕನೋಡಿ ಥಾರಾ-3 ಮತ್ತು ತೆಕ್ಕನೋಡಿ ಕೆಟ್-4.
ಉತ್ತಮ ಸಾಧ|ನೆಗೈಯ್ಯುವ ನಾಲ್ಕು ದೋಣಿಗಳು ನೆಹರು ಟ್ರೋಫಿ ಫೈನಲ್‍ನಲ್ಲಿ ಸ್ಪರ್ಧಿಸಲಿವೆ. ಎಲ್ಲಾ ಸಣ್ಣ ದೋಣಿ ವಿಭಾಗಗಳಲ್ಲಿ ಲಕ್ಷ್ಯ ಪ್ರಾಪ್ತಿ ಸಮಯದ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ.




.webp)
