ನವದೆಹಲಿ: ಪಾಕಿಸ್ತಾನದಿಂದ ಭಾರತ, ಭಾರತದಿಂದ ಪಾಕಿಸ್ತಾನ, ಶ್ರೀಲಂಕಾದಿಂದ ಭಾರತ… ಹೀಗೆ ಪ್ರೀತಿಯ ಕಾರಣಕ್ಕೆ ದೇಶದಿಂದ ದೇಶಕ್ಕೆ ಪ್ರೇಮಿಗಳು ಹೋದ ಪ್ರಕರಣಕ್ಕೆ ಹೊಸ ಸೇರ್ಪಡೆ ಎಂಬಂತೆ ಇನ್ನೊಂದು ಅಂಥದ್ದೇ ಗಡಿ ಮೀರಿದ ಪ್ರಕರಣ ನಡೆದಿದೆ.
0
samarasasudhi
ಆಗಸ್ಟ್ 21, 2023
ನವದೆಹಲಿ: ಪಾಕಿಸ್ತಾನದಿಂದ ಭಾರತ, ಭಾರತದಿಂದ ಪಾಕಿಸ್ತಾನ, ಶ್ರೀಲಂಕಾದಿಂದ ಭಾರತ… ಹೀಗೆ ಪ್ರೀತಿಯ ಕಾರಣಕ್ಕೆ ದೇಶದಿಂದ ದೇಶಕ್ಕೆ ಪ್ರೇಮಿಗಳು ಹೋದ ಪ್ರಕರಣಕ್ಕೆ ಹೊಸ ಸೇರ್ಪಡೆ ಎಂಬಂತೆ ಇನ್ನೊಂದು ಅಂಥದ್ದೇ ಗಡಿ ಮೀರಿದ ಪ್ರಕರಣ ನಡೆದಿದೆ.
ದಕ್ಷಿಣ ಕೊರಿಯಾದ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಮದುವೆಯಾಗುವ ಸಲುವಾಗಿ ಭಾರತಕ್ಕೆ ಬಂದಿರುವ ಘಟನೆ ನಡೆದಿದೆ.
ಉತ್ತರಪ್ರದೇಶದ ಷಹಜಹಾನ್ಪುರದ ಸುಖ್ಜೀತ್ ಸಿಂಗ್ ದಕ್ಷಿಣಕೊರಿಯಾದ ಕೆಫೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಕೆಲವು ದಿನಗಳ ಬಳಿಕ ಅಲ್ಲಿನ 23 ವರ್ಷದ ಯುವತಿ ಕಿಮ್ ಬೊಹ್ ನಿ ಕೂಡ ಅದೇ ಕೆಫೆಗೆ ಕೆಲಸಕ್ಕೆ ಸೇರಿದ್ದಳು. ನಂತರ ಇಬ್ಬರಿಗೂ ಪರಿಚಯವಾಗಿ, ಸ್ನೇಹ ಪ್ರೇಮವಾಗಿ ಪರಿಣಮಿಸಿತ್ತು.
ಈ ಮಧ್ಯೆ ಆರು ತಿಂಗಳ ಮಟ್ಟಿಗೆ ಆತ ಭಾರತಕ್ಕೆ ಮರಳಿದ್ದ. ಆದರೆ ಈ ಅವಧಿಯಲ್ಲಿ ಆತನನ್ನು ಬಿಟ್ಟಿರಲಾಗದೆ ಚಡಪಡಿಸಿದ್ದ ಕೊರಿಯನ್ ಯುವತಿ ತನ್ನ ದೇಶ ಬಿಟ್ಟು ಭಾರತಕ್ಕೆ ಬಂದಿದ್ದಾಳೆ. ಎರಡು ದಿನಗಳ ಹಿಂದೆ ಗುರುದ್ವಾರದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಸದ್ಯ ಇಬ್ಬರೂ ಇಲ್ಲಿನ ತೋಟದ ಮನೆಯಲ್ಲಿ ವಾಸವಿದ್ದಾರೆ.
ಕಿಮ್ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ಒಂದು ತಿಂಗಳ ಮಟ್ಟಿಗೆ ಇಲ್ಲಿರಲಿದ್ದಾಳೆ. ಆ ಬಳಿಕ ಆಕೆ ಅಲ್ಲಿಗೆ ವಾಪಸ್ ತೆರಳಲಿದ್ದಾಳೆ. ಅದಾಗಿ ಮೂರು ತಿಂಗಳ ಬಳಿಕ ಸುಖ್ಜೀತ್ ಕೂಡ ಸೌತ್ ಕೊರಿಯಾಗೆ ಹೋಗಲಿದ್ದಾನೆ. ಮುಂದೆ ಆಕೆಯೊಂದಿಗೆ ದಕ್ಷಿಣ ಕೊರಿಯಾದಲ್ಲಿ ನೆಲೆಸುವುದಾಗಿ ಆತ ಹೇಳಿಕೊಂಡಿದ್ದಾನೆ.