ತಿರುವನಂತಪುರಂ: ನಾಮ ಜಪ ಯಾತ್ರೆಯಲ್ಲಿ ಪಾಲ್ಗೊಂಡವರ ವಿರುದ್ಧದ ಪ್ರಕರಣ ರದ್ದು ಕೋರಿ ಎನ್‍ಎಸ್‍ಎಸ್ ಸಲ್ಲಿಸಿರುವ ಅರ್ಜಿಯ ಕುರಿತು ಹೈಕೋರ್ಟ್ ಸರ್ಕಾರ ಮತ್ತು ಪೋಲೀಸರಿಂದ ವಿವರಣೆ ಕೇಳಿದೆ.
ನಾಮಜಪಕ್ಕೆ ಕಂಟೋನ್ಮೆಂಟ್ ಪೋಲೀಸ್ ಠಾಣೆಯಿಂದ ಅನುಮತಿ ಪಡೆದಿರುವುದಾಗಿ ಎನ್‍ಎಸ್‍ಎಸ್ ನ್ಯಾಯಾಲಯದಲ್ಲಿ ವಾದ ಮಂಡಿಸಿದೆ. ಆದರೆ ಠಾಣೆಯಿಂದ ಅನುಮತಿ ನೀಡಿಲ್ಲ, ಕಾನೂನು ಬಾಹಿರವಾಗಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಶುಕ್ರವಾರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಪ್ರಕರಣದಲ್ಲಿ ಯಾವುದೇ ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಎನ್‍ಎಸ್‍ಎಸ್ ಉಪಾಧ್ಯಕ್ಷ ಎಂ.ಸಂಗೀತಕುಮಾರ್ ಅವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣವನ್ನು ಕಾನೂನು ಮಾನ್ಯವಲ್ಲ ಎಂದು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಸಂಗೀತ್ ಕುಮಾರ್ ಪ್ರಕರಣದ ಮೊದಲ ಆರೋಪಿ.
ಶಂಸೀರ್ ಅವರ ಹಿಂದೂ ವಿರೋಧಿ ಹೇಳಿಕೆಯನ್ನು ವಿರೋಧಿಸಿ ಎನ್‍ಎಸ್‍ಎಸ್ ತಿರುವನಂತಪುರ ತಾಲೂಕು ಒಕ್ಕೂಟದ ವಿರುದ್ಧ ಪೋಲೀಸರು ಕಳೆದ ಬುಧವಾರ ಪ್ರಕರಣ ದಾಖಲಿಸಿದ್ದರು. ಅನ್ಯಾಯವಾಗಿ ಗುಂಪು ಸೇರಿರುವುದು ಎಂಬ ಆರೋಪ ಕೇಳಿಬಂದಿತ್ತು. ಸಂಗೀತ್ ಕುಮಾರ್ ಅಲ್ಲದೆ ಸುಮಾರು ಒಂದು ಸಾವಿರ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.





