ಪತ್ತನಂತಿಟ್ಟ: ಈ ವರ್ಷ ನಡೆಯಲಿರುವ ಶಬರಿಮಲೆ ನಿರಪುತ್ತÀರಿ ಪೂಜೆಯ ನಿಮಿತ್ತ ಕೆಎಸ್‍ಆರ್‍ಟಿಸಿ ಹೆಚ್ಚಿನ ಸೇವೆಗಳನ್ನು ಸಿದ್ಧಪಡಿಸಿದೆ.
ಹಿಂದಿನ ವರ್ಷಗಳಿಗಿಂತ ಈ ವರ್ಷ ಹೆಚ್ಚಿನ ಸೇವೆ ಇರಲಿದೆ. ನಿರಪುತ್ತರಿ ಪೂಜೆಯ ಸಂದರ್ಭದಲ್ಲಿ ಶಬರಿಮಲೆಯಲ್ಲಿ ಆಗಸ್ಟ್ 9 ರ ಬುಧವಾರ ಸಂಜೆ 5 ಗಂಟೆಗೆ ಗರ್ಭಗೃಹದ ಬಾಗಿಲು ತೆರೆಯಲಾಗುತ್ತದೆ. ಪೂಜೆಗಳ ನಂತರ ಗುರುವಾರ ರಾತ್ರಿ 10ಕ್ಕೆ ಬಾಗಿಲು ಮುಚ್ಚಲಾಗುತ್ತದೆ. ಯಾತ್ರಾರ್ಥಿಗಳಿಗೆ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಮಾಹಿತಿ ನೀಡಿದೆ.
ತಿರುವನಂತಪುರಂ, ಪತ್ತನಂತಿಟ್ಟ, ಕೊಟ್ಟಾರಕ್ಕರ, ಪುನಲೂರು ಮತ್ತು ಚೆಂಗನ್ನೂರಿನಿಂದ ಪಂಪಾಕ್ಕೆ ಹೋಗುವ ಸೇವೆಗಳನ್ನು ಭಕ್ತರ ನೂಕುನುಗ್ಗಲಿಗೆ ಅನುಗುಣವಾಗಿ ವ್ಯವಸ್ಥೆ ಮಾಡಲಾಗಿದೆ. ಆಸನ ಬುಕಿಂಗ್ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ನಿಲಯ್ಕಲ್ - ಪಂಬಾ ಸರಣಿ ಸೇವೆಗಳನ್ನು ಕ್ರಮಬದ್ಧಗೊಳಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: ಕೆ.ಎಸ್.ಆರ್.ಟಿ.ಸಿ. ಪಂಬಾ: 0473-5203445,
ತಿರುವನಂತಪುರಂ: 0471-2323979, ಕೊಟ್ಟಾರಕ್ಕರ: 0474-2452812, ಪತ್ತನಂತಿಟ್ಟ: 0468-2222366.





