ತಿರುವನಂತಪುರ: ಪುನಲೂರು ತಾಲೂಕು ಆಸ್ಪತ್ರೆಯಲ್ಲಿ 11 ರೋಗಿಗಳು ಚುಚ್ಚುಮದ್ದು ಸ್ವೀಕರಿಸಿದ ಬಳಿಕ ಅಡ್ಡ ಪರಿಣಾಮ ಅನುಭವಿಸಿದ ಘಟನೆಯಲ್ಲಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ನರ್ಸಿಂಗ್ ಅಧಿಕಾರಿ ಮತ್ತು ಗ್ರೇಡ್ 2 ಅಟೆಂಡೆಂಟ್ ಅನ್ನು ಅಮಾನತುಗೊಳಿಸಲಾಗಿದೆ.
ಕೊಲ್ಲಂ ಜಿಲ್ಲಾ ವೈದ್ಯಾಧಿಕಾರಿಗಳ ತನಿಖೆಯ ನಂತರ ಅಮಾನತುಗೊಳಿಸಲಾಗಿದೆ. ಘಟನೆಯನ್ನು ಗಮನಿಸಿದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತನಿಖೆ ನಡೆಸುವಂತೆ ಆರೋಗ್ಯ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದರು. ನಂತರ ಕೊಲ್ಲಂ ಡಿಎಂಒ ತನಿಖೆ ನಡೆಸಿದರು.. ತನಿಖೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಶುಕ್ರವಾರ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಪುನಲೂರು ತಾಲೂಕು ಆಸ್ಪತ್ರೆಯಿಂದ ಇಂಜೆಕ್ಷನ್ ತೆಗೆದುಕೊಂಡ ನಂತರ 11 ರೋಗಿಗಳು ದೈಹಿಕ ಅಸ್ವಸ್ಥತೆಯನ್ನು ಅನುಭವಿಸಿದರು. ಇವರಲ್ಲಿ ಮೂವರು ಮಕ್ಕಳನ್ನು ತಿರುವನಂತಪುರ ಎಸ್‍ಎಟಿ ಆಸ್ಪತ್ರೆಗೆ ದಾಖಲಿಸಲಾಯಿತು. 8 ಮಂದಿಯನ್ನು ಪುನಲೂರು ತಾಲೂಕು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಸ್ಥಳಾಂತರಿಸಲಾಯಿತು. ಅವರೆಲ್ಲರಿಗೂ ನಡುಕ ಮತ್ತು ದೇಹ ದುರ್ಬಲವಾಗುತ್ತಿರುವಂತೆ ಭಾಸವಾಗುತ್ತಿದ್ದಂತೆ ಐಸಿಯುಗೆ ಸ್ಥಳಾಂತರಿಸಲಾಯಿತು. ಮೂವರು ಮಕ್ಕಳನ್ನು ತಿರುವನಂತಪುರಂ ಎಸ್‍ಎಟಿ ಆಸ್ಪತ್ರೆಗೆ ರವಾನಿಸಲಾಗಿದೆ.





