ಕುಂಬಳೆ: ಕಾಸರಗೋಡಿನ ಅಭಿವೃದ್ಧಿ ಕ್ಷೇತ್ರದಲ್ಲಿ ಚಿನ್ನದ ಗರಿಯಾಗಿ ಆರಂಭವಾಗಿರುವ ಕುಂಬಳೆ-ಕುಂಟಂಗೇರಡ್ಕ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ (ಐಎಚ್‍ಆರ್‍ಡಿ) ಕ್ಯಾಂಪಸ್ ಪ್ರದೇಶವು ಡ್ರಗ್ಸ್ ಮಾಫಿಯಾಗಳ ಸಕ್ರಿಯ ತಾಣವಾಗುತ್ತಿದೆ ಎಂದು ಕುಂಬಳೆ ಪಂಚಾಯತಿ ಯೂತ್ ಲೀಗ್ ಆತಂಕ ವ್ಯಕ್ತಪಡಿಸಿದೆ. ರಾತ್ರಿ ವೇಳೆ ಡ್ರಗ್ ಮಾಫಿಯಾಗಳು ಮತ್ತು ಕಿಡಿಗೇಡಿಗಳು ವ್ಯಾಪಕ ಠಳಾಯಿಸುವಿಕೆ ಕಳವಳಕಾರಿಯೆಮದು ಲೀಗ್ ತಿಳಿಸಿದೆ.
ಕಾಲೇಜು ಕಟ್ಟಡ ಉದ್ಘಾಟನೆಯ ಹಿಂದಿನ ದಿನ ಕೆಎಸ್‍ಯುಎಂಎಸ್‍ಎಫ್ ವಿದ್ಯಾರ್ಥಿ ಸಂಘ ಹಾಕಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದರು. ಈ ವರ್ಷ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಹಾಕಲಾಗಿದ್ದ ಫ್ಲಕ್ಸ್, ಧ್ವಜಗಳು ಕತ್ತಲೆಯ ಮರೆಯಲ್ಲಿ ನಾಶವಾಗಿವೆ. ಸುತ್ತಲಿನ ಗೋಡೆಗಳು ಮತ್ತು ಹೈಮಾಸ್ ದೀಪಗಳ ಕೊರತೆಯು ಕುಡುಕ ಮಾಫಿಯಾಕ್ಕೆ ಸಾಕಷ್ಟು ಆಶ್ರಯ ನೀಡುತ್ತದೆ. ಈ ಪ್ರದೇಶದಲ್ಲಿ ಸಮಾಜಘಾತುಕರ ಅಟ್ಟಹಾಸದಿಂದ ಸ್ಥಳೀಯರ ನಿದ್ದೆ ಕೆಡಿಸುತ್ತಿದೆ ಎಂಬ ದೂರು ಕೂಡ ಇದೆ. ಇಂತಹ ಸಮಾಜಘಾತುಕರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಯೂತ್ ಲೀಗ್ ಕುಂಬಳೆ ಪಂಚಾಯತಿ ಸಮಿತಿ ರಾತ್ರಿ ವೇಳೆ ಪೋಲೀಸ್ ಗಸ್ತು ಕಾರ್ಯವನ್ನು ತೀವ್ರಗೊಳಿಸಿ ಸರ್ಕಾರ ಕ್ರಮ ಕೈಗೊಳ್ಳುವಂತೆ ಮನವಿ ನೀಡಲು ನಿರ್ಧರಿಸಿದೆ.


