ಪೆರ್ಲ: ಕಾಂಗ್ರೆಸ್ ನ ಜನ ಮೆಚ್ಚಿನ ನೇತಾರ, ಸಂಸದ ರಾಹುಲ್ ಗಾಂಧಿಯವರಿಗೆ ವಿಧಿಸಿದ ಸಂಸತ್ ಅಯೋಗ್ಯತೆಗೆ ಸುಪ್ರಿಂಕೋರ್ಟ್ ತಡೆಯಾಜ್ಞೆ ತಂದಿರುವುದನ್ನು ಸ್ವಾಗತಿಸಿ ಎಣ್ಮಕಜೆ ಮಂಡಲ ಕಾಂಗ್ರೆಸ್ ವತಿಯಿಂದ ಶುಕ್ರವಾರ ಸಂಜೆ ಪೆರ್ಲ ಪೇಟೆಯಲ್ಲಿ ಸಂಭ್ರಮದ ಮೆರವಣಿಗೆ ನಡೆಸಲಾಯಿತು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್ ಮೆರವಣಿಗೆಯನ್ನು ಉದ್ಘಾಟಿಸಿದರು. ನ್ಯಾಯವಾದಿ ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ನೇತಾರರಾದ ಅಬ್ದುಲ್ಲ ಕುರೆಡ್ಕ, ರಸಾಕ್ ನಲ್ಕ, ಮಾಯಿಲ ನಾಯ್ಕ್, ಜಬ್ಬಾರ್ ನಲ್ಕ, ಅಮರ್ ಅಬ್ದುಲ್ಲ, ಕರಿಂ ಕಾಟುಕುಕ್ಕೆ, ಸಕೀರ್ ಜಮಾಲ್, ಹನೀಫ್ ಕಾಟುಕುಕ್ಕೆ, ಶ್ರೀನಿವಾಸ್ ಶೆಣೈ, ಶೇರಿಫ್ ಕಟ್ಟದಮೂಲೆ, ನಾರಾಯಣ ನಾಯಕ್, ನೌಷದ್ ಕುದ್ರೆಡ್ಕ, ಶೇಖಾಲಿ, ರಾಮ ಕಜಂಪಾಡಿ, ಹಾರಿಸ್ ಒಳಮುಗೇರ್, ಲತೀಫ್, ಸಿದ್ಧಿಕ್, ಮೊಹಮ್ಮದ್ ಮೊದಲಾದವರು ನೇತೃತ್ವ ನೀಡಿದರು.

.jpg)
