ಬದಿಯಡ್ಕ: ಮವ್ವಾರು ಮರಿಕ್ಕಾನ ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲಾ ರಕ್ಷಕ- ಶಿಕ್ಷಕ ಸಂಘದ ಮಹಾಸಭೆ ಜರಗಿತು. ರಕ್ಷಕ-ಶಿಕ್ಷಕ ಸಂಘ, ಮಾತೃ ಸಂಘ ಹಾಗೂ ಸುರಕ್ಷಾ ಸಂಘ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ರವೀಂದ್ರ ರೈ ಗೋಸಾಡ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಹಾಗೂ ಸತೀಶ್ ಮಾಚಾವು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಮಾತೃ ಸಂಘದ ಅಧ್ಯಕ್ಷೆಯಾಗಿ ಸವಿತಾ ಮಾಚಾವು ಹಾಗೂ ಉಪಾಧ್ಯಕ್ಷರಾಗಿ ರಮ್ಯ ಗೋಸಾಡ ಇವರು ಆಯ್ಕೆಯಾದರು. ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷರಾಗಿ ಪಿ ಅಬ್ದುಲ್ ಖಾದರ್ ಮರಿಕ್ಕಾನ ಹಾಗೂ ಉಪಾಧ್ಯಕ್ಷರಾಗಿ ಸತೀಶ್ ರೈ ಗೋಸಾಡ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಪೂರ್ವ ಅಧ್ಯಕ್ಷ ಸತೀಶ್ ರೈ ವಹಿಸಿದ್ದರು. ಶಾಲೆ ವ್ಯವಸ್ಥಾಪಕ ನರಸಿಂಹ ಭಟ್ ಪಣಿಯೆ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಉಷಾಕುಮಾರಿ ಎ ಎಸ್. ಸ್ವಾಗತಿಸಿ, ಸಹಾಯಕ ಅಧ್ಯಾಪಿಕೆ ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು. ಗಾಯತ್ರಿ ಕೆ. ವಂದಿಸಿದರು.


