ಬದಿಯಡ್ಕ: ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಆಸ್ಯದ ಅಂಗವಾಗಿ ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ತಾಳಮದ್ದಳೆ ಅಷ್ಟಾಹದ ಅಂಗವಾಗಿ ಶುಕ್ರವಾರ ವಾಲಿವಧೆ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.
ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ ಭಟ್, ಹೆಬ್ರಿ ಗಣೇಶ್ ಕುಮಾರ್(ಭಾಗವತಿಕೆ), ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶ್ರೀಧರ ವಿಟ್ಲ(ಚೆಂಡೆ-ಮೃದಂಗ)ದಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಸೂರಿಕುಮೇರಿ ಗೋವಿಂದ ಭಟ್, ಡಾ.ಎಂ.ಪ್ರಭಾಕರ ಜೋಶಿ, ಕದ್ರಿ ನವನೀತ ಶೆಟ್ಟಿ, ಜಬ್ಬಾರ್ ಸಮೋ ಸಂಪಾಜೆ, ಪ್ರಸಾದ್ ಗೌಡ ಸವಣೂರು ಭಾಗವಹಿಸಿದ್ದರು.



