ರಾಯಪುರ : ಸಮವಸ್ತ್ರ ಧರಿಸುವುದನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸುವಂತೆ ಪ್ರೋತ್ಸಾಹಿಸಲು ಇಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತಾನೇ ಸಮವಸ್ತ್ರ ಧರಿಸುವ ಮೂಲಕ ಗಮನ ಸೆಳೆದಿದ್ದಾರೆ.
0
samarasasudhi
ಆಗಸ್ಟ್ 12, 2023
ರಾಯಪುರ : ಸಮವಸ್ತ್ರ ಧರಿಸುವುದನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸುವಂತೆ ಪ್ರೋತ್ಸಾಹಿಸಲು ಇಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತಾನೇ ಸಮವಸ್ತ್ರ ಧರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಗೋಕುಲರಾಮ್ ವರ್ಮಾ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಾಹ್ನವಿ ಯದು ಎಂಬವರು ಪ್ರತಿ ಶನಿವಾರದಂದು ಸಮವಸ್ತ್ರ ಧರಿಸಿ ಶಾಲೆಗೆ ಬರುತ್ತಿದ್ದು.
'ನಮ್ಮ ಶಾಲೆಗೆ ಬರುವ ಬಹುತೇಕ ವಿದ್ಯಾರ್ಥಿಗಳು ಹಿಂದುಳಿದ ವರ್ಗಕ್ಕೆ ಸೇರಿದವರು. ಹಲವು ವಿದ್ಯಾರ್ಥಿಗಳು ಖಾಲಿ ಹೊಟ್ಟೆಯಲ್ಲೇ ಬರುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಅಚ್ಚುಕಟ್ಟಾಗಿ ಸಮವಸ್ತ್ರ ಧರಿಸಿ ಬರುವಂತೆ ಹೇಳಲಾಗುತ್ತದೆಯೇ? ಈ ಪರಿಸ್ಥಿತಿಯನ್ನು ಸುಧಾರಿಸಲು ನಾನು ಸಮವಸ್ತ್ರ ಧರಿಸಿ ಶಾಲೆಗೆ ಬರುವ ಸ್ನೇಹಪರವಾದ ಮಾರ್ಗವನ್ನು ಕಂಡುಕೊಂಡೆ' ಎಂದು ಜಾಹ್ನವಿ ಅವರು ತಿಳಿಸಿದ್ದಾರೆ.
'ಸಮವಸ್ತ್ರ ಧರಿಸಿ ಮೊದಲ ಬಾರಿ ಶಾಲೆಗೆ ಬಂದಾಗ ವಿದ್ಯಾರ್ಥಿಗಳು ಅಚ್ಚರಿಗೊಂಡಿದ್ದರು. ಕೆಲವು ವಿದ್ಯಾರ್ಥಿಗಳು ನನ್ನನ್ನು ಅಪ್ಪಿಕೊಂಡರು. ಅಚ್ಚುಕಟ್ಟಾಗಿ ಸಮವಸ್ತ್ರ ಧರಿಸುವುದು ಹೇಗೆ ಎಂಬುದನ್ನು ನಾನು ಅವರಿಗೆ ಮನದಟ್ಟು ಮಾಡಿಸಿದೆ' ಎಂದು ವಿವರಿಸಿದರು.
'ಸಮವಸ್ತ್ರ ಧರಿಸಿ ಬರುವ ಬಗ್ಗೆ ಜಾಹ್ನವಿ ಅವರು ನನ್ನಲ್ಲಿ ಚರ್ಚಿಸಿದರು. ನಾನು ಅದಕ್ಕೆ ಕೂಡಲೇ ಒಪ್ಪಿಗೆ ಸೂಚಿಸಿದೆ. ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕಾರಣವಾಗಿದೆ' ಎಂದು ಮುಖ್ಯಶಿಕ್ಷಕ ಎಂ. ಗುರುನಾಥ್ ಹೇಳಿದ್ದಾರೆ.