HEALTH TIPS

ನೂಹ್: ಶೋಭಾಯಾತ್ರೆಗೆ ಬಂದಿದ್ದ ಅಯೋಧ್ಯೆಯ ಜಗದ್ಗುರು ಪರಮಹಂಸ ಆಚಾರ್ಯರಿಗೆ ತಡೆ

             ಗುರುಗ್ರಾಮ: ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ಸರ್ವ ಜಾತಿಯ ಹಿಂದೂ ಮಹಾ ಪಂಚಾಯಿತಿ ಇಂದು ಕರೆ ಕೊಟ್ಟಿರುವ ಬ್ರಿಜ್‌ ಮಂಡಲ್‌ ಶೋಭಾ ಯಾತ್ರೆಯಲ್ಲಿ ಭಾಗವಹಿಸಲು ಅಯೋಧ್ಯೆಯಿಂದ ಆಗಮಿಸಿದ್ದ ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್ ಅವರನ್ನು ಸೊಹ್ನಾ ಟೋಲ್ ಪ್ಲಾಜಾದಲ್ಲೇ ತಡೆದು ನಿಲ್ಲಿಸಲಾಗಿದೆ.


                    'ಶೋಭಾಯಾತ್ರೆಯಲ್ಲಿ ಭಾಗವಹಿಸಲು ನಾನು ಅಯೋಧ್ಯೆಯಿಂದ ಇಲ್ಲಿಗೆ ಬಂದಿದ್ದೇವೆ. ಜಿಲ್ಲಾಡಳಿತ ನಮ್ಮನ್ನು ಇಲ್ಲಿಯೇ ತಡೆದು ನಿಲ್ಲಿಸಿದೆ. ಪೊಲೀಸರು ನಮ್ಮನ್ನು ಮುಂದೆ ಹೋಗಲೂ ಬಿಡುತ್ತಿಲ್ಲ, ಹಿಂದಿರುಗಲೂ ಬಿಡುತ್ತಿಲ್ಲ. ಹಾಗಾಗಿ, ನಾನು ಆಮರಣಾಂತ ಉಪವಾಸ ಮಾಡುತ್ತಿದ್ದೇನೆ. ಜಿಲ್ಲಾಡಳಿತ ನನ್ನನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಅಲ್ಲಿಯೂ ಸಾಯುವವರೆಗೂ ಉಪವಾಸ ಮಾಡುತ್ತೇನೆ' ಎಂದು ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ ಹೇಳಿದ್ದಾರೆ.

           ಶೋಭಾ ಯಾತ್ರೆ ಹಿನ್ನೆಲೆಯಲ್ಲಿ ನೂಹ್‌ ಜಿಲ್ಲೆ ಮತ್ತು ಇನ್ನಿತರ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಹೊರಗಿನವರು ನೂಹ್‌ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

            ನೂಹ್‌ ಜಿಲ್ಲೆಯಲ್ಲಿ ಜುಲೈನಲ್ಲಿ ಕೋಮು ಹಿಂಸಾಚಾರದಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದರಿಂದ, ಶೋಭಾ ಯಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡಲು ನಿರಾಕರಿಸಿದೆ. ನೂಹ್ ಜಿಲ್ಲೆಯಷ್ಟೇ ಅಲ್ಲದೇ, ಅಂತರ ಜಿಲ್ಲಾ ಗಡಿಗಳು ಮತ್ತು ಅಂತರರಾಜ್ಯ ಗಡಿಗಳಲ್ಲೂ ಭದ್ರತೆ ಬಿಗಿಗೊಳಿಸಲಾಗಿದೆ.

               ಜಿಲ್ಲೆಯ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ. ಮಲ್ಹಾರ್ ದೇವಸ್ಥಾನಕ್ಕೆ ಹೋಗುವ ಮಾರ್ಗವನ್ನು ಸಹ ಮುಚ್ಚಲಾಗಿದೆ. ಆದರೆ, ಕೆಎಂಪಿ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರ ಮುಂದುವರಿಯಲಿದೆ ಎಂದು ನೂಹ್‌ ಜಿಲ್ಲೆಯ ಪೊಲೀಸ್‌ ವಕ್ತಾರರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries