ಬದಿಯಡ್ಕ: ಓಣಂ ಹಬ್ಬವನ್ನು ಬೇಳ ಸೈಂಟ್ ಮೇರೀಸ್ ಕಾಲೇಜಿನಲ್ಲಿ ಸಡಗರದಿಂದ ಆಚರಿಸಲಾಯಿತು. ಕಾಯ9ಕ್ರಮವನ್ನುಕಾಲೇಜಿನ ಸಂಚಾಲಕರಾದ ಫಾದರ್ ಸ್ಟಾನಿ ಪಿರೇರಾ ಅವರು ಹೂರಂಗೋಲಿಯನ್ನು ಪೂಣ9ಗೊಳಿಸುವ ಮೂಲಕ ಉದ್ಘಾಟಿಸಿದರು.
ಕಾಲೇಜು ಪ್ರಾಂಶುಪಾಲ ವಂದನೀಯ ಡಾ. ರೋಕಿ ಫೆನಾ9ಂಡಿಸ್ ಅವರು ಓಣಂ ಸಂದೇಶ ನೀಡಿದರು. ಕೇರಳದ ಪಾರಂಪರಿಕ ಧಿರಿಸಿನೊಂದಿಗೆ ವಿಧ್ಯಾರ್ಥಿಗಳು ನಾಣಾ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಿಂಗಾರಿಮೇಳ, ಹೂವಿನ ರಂಗೋಲಿ, ಬ್ರಹತ್ ತಿರುವಾದಿರ, ಓಣಂ ಆಟೋಟ, ಓಣಂ ಔತಣಕೂಟ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕಾಯ9ಕ್ರಮದಲ್ಲಿ ಸೈಂಟ್ ಮೇರೀಸ್ ಶಾಲೆಯ ಶಿಕ್ಷಕ ವೃಂದ, ಕಾಲೇಜು ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಜೆನೀಟ ಸ್ವಾಗತಿಸಿದರು. ಅನೀಷಾ ಕಾಯ9ಕ್ರಮ ರೂಪಿಸಿದರು. ಅಶ್ವಿನಿ ವಂದಿಸಿದರು.





