ಪೆರ್ಲ: ಎಣ್ಮಕಜೆ ಪಂಚಾಯಿತಿ ಕಾಟುಕುಕ್ಕೆ ಸನಿಹದ ಬಾಳೆಮೂಲೆ ದಂಬೆ ನಿವಾಸಿ ಸೋಮಶೇಖರ ಎಂಬವರ ಪತ್ನಿ ಕವಿತಾ(26)ಅವರ ಮೃತದೇಹ ಮನೆ ಸನಿಹದ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೃಷಿಕರಾಗಿರುವ ಸೋಮಶೇಖರ ತೋಟದಿಂದ ಕೆಲಸಬಿಟ್ಟು ಮನೆಗೆ ಆಗಮಿಸಿದಾಗ ಕವಿತಾ ನಾಪತ್ತೆಯಾಗಿದ್ದರು. ಹುಡುಕಾಡುವ ಮಧ್ಯೆ ಮೃತದೇಹ ಪತ್ತೆಯಾಗಿದೆ. ಎರಡುವರೆ ವರ್ಷದ ಹಿಂದೆ ಇವರ ವಿವಾಹ ನಡೆದಿದ್ದು, ದಂಪತಿಗೆ ಒಂದುವರೆ ವರ್ಷ ಪ್ರಾಯದ ಹೆಣ್ಣುಮಗುವಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತದೇಹದ ಶವಮಹಜರು ನಡೆಸಲಾಯಿತು.





