HEALTH TIPS

ಒಂದೇ ವಾರದಲ್ಲಿ ಪ್ರಧಾನಿ ಮೋದಿ ವಾಟ್ಸ್‌ಆ‍್ಯಪ್‌ ಚಾನೆಲ್‌ಗೆ 50 ಲಕ್ಷ ಫಾಲೋವರ್ಸ್‌

             ವದೆಹಲಿ: ಮೆಟಾ ಒಡೆತನದ ವಾಟ್ಸ್‌ಆ‍್ಯಪ್‌ ಹೊಸದಾಗಿ ಪರಿಚಯಿಸಿರುವ ವಾಟ್ಸ್‌ಆ‍್ಯಪ್‌ ಚಾನೆಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದೇ ವಾರದಲ್ಲಿ 50 ಲಕ್ಷ (5 ಮಿಲಿಯನ್‌) ಫಾಲೋವರ್ಸ್‌ಗಳಾಗಿದ್ದಾರೆ.

               ಸೆ.20ರಂದು ಆರಂಭಿಸಲಾದ ಪ್ರಧಾನಿ ಮೋದಿ ಅವರ ವಾಟ್ಸ್‌ಆ‍್ಯಪ್‌ ಚಾನೆಲ್ ಒಂದೇ ದಿನದಲ್ಲಿ ಒಂದು ಲಕ್ಷ ಫಾಲೋವರ್ಸ್‌ ಹೊಂದುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿತ್ತು.

             ಅಲ್ಲದೆ ಅವರ ಮೊದಲ ಪೋಸ್ಟ್‌ಗೆ ಒಂದೇ ನಿಮಿಷದಲ್ಲಿ ನೂರಾರು ಪ್ರತಿಕ್ರಿಯೆಗಳು ಬಂದಿದ್ದವು.


                ಸದ್ಯ 5 ಲಕ್ಷ ಫಾಲೋವರ್ಸ್‌ ಆದ ಬಗ್ಗೆ ಚಾನೆಲ್‌ನಲ್ಲಿ ಮೋದಿ ಅವರು ಪೋಸ್ಟ್‌ ಹಂಚಿಕೊಂಡಿದ್ದು, 'ನಾವು 50 ಲಕ್ಷಕ್ಕೂ ಹೆಚ್ಚು ಸಮುದಾಯವಾಗಿರುವುದರಿಂದ, ನನ್ನ ವಾಟ್ಸ್‌ಆ‍್ಯಪ್‌ ಚಾನೆಲ್ ಮೂಲಕ ನನ್ನೊಂದಿಗೆ ಸಂಪರ್ಕ ಹೊಂದಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ! ನಿಮ್ಮ ಪ್ರತಿಯೊಬ್ಬರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞನಾಗಿರುತ್ತೇನೆ' ಎಂದಿದ್ದಾರೆ.

               ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರು ಅತಿ ಹೆಚ್ಚು ಪಾಲೋವರ್ಸ್‌ ಹೊಂದಿರುವ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ, ಎಕ್ಸ್‌ನಲ್ಲಿ (ಟ್ವಿಟರ್‌) 91 ಮಿಲಿಯನ್‌ ಲಕ್ಷ ಫಾಲೋವರ್ಸ್‌ ಹೊಂದುವ ಮೂಲಕ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಭಾರತೀಯ ಎನಿಸಿಕೊಂಡಿದ್ದಾರೆ. ಇನ್ನು ಫೇಸ್ಬುಕ್‌ನಲ್ಲಿ 48 ಮಿಲಿಯನ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ 78 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries