ಕುಂಬಳೆ : ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿ ಮಹಮ್ಮದ್ ಫರ್ಹಾಸ್ ಕಾರು ಅಪಘಾತದಲ್ಲಿ ಮೃತಪಟ್ಟ ಪ್ರಕರಣಕ್ಕೆ ಕಾರಣರಾದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಂಬಳೆ ಪೊಲೀಸ್ ಠಾಣೆಗೆ ಮುತ್ತಿಗೆ ನಡೆಸಿದ ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ಸೇರಿದಂತೆ ಹಲವರ ವಿರುದ್ಧ ಪೊಲೀಸರು ಕೇಸು ದಆಖಲಿಸಿಕೊಂಡಿದ್ದಾರೆ. ಪ್ರದೀಪ್ ಕುಮಾರ್, ಇ.ಕೆ ಮಹಮ್ಮದ್, ಸಿದ್ದಿಕ್ ದಂಡೆಗೋಳಿ, ಸವಾದ್ ಅಂಗಡಿಮೊಗರು, ಪೃಥ್ವೀರಾಜ್, ಶೆರಿಲ್ ಕಯ್ಯಂಕುಡೆಲ್, ಲಕ್ಷ್ಮಣ ಪ್ರಭು ಕುಂಬಳೆ ಸಹಿತ 53ಮಂದಿ ವಿರುದ್ಧ ಈ ಕೇಸು ದಾಖಲಾಗಿದೆ.