HEALTH TIPS

ಓಣಂ ಸಪ್ತಾಹ ಆಚರಣೆ ನಾಳೆ ಸಮಾರೋಪ: ಮೆರವಣಿಗೆಗೆ ರಾಜ್ಯಪಾಲರಿಂದ ಚಾಲನೆ: ಮೆರವಣಿಗೆ ವೀಕ್ಷಿಸಲು ವಿಶೇಷ ಸೌಲಭ್ಯ

            ತಿರುವನಂತಪುರ: ರಾಜ್ಯ ಸರ್ಕಾರದ ಓಣಂ ಸಪ್ತಾಹದ ಅಂಗವಾಗಿ ಪಥಸಂಚಲನಕ್ಕೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಧ್ವಜಾರೋಹಣ ನೆರವೇರಿಸುವರು. ಸಭಾಪತಿ ಎ.ಎನ್.ಶಂಸೀರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶನಿವಾರ ಸಂಜೆ 5 ಗಂಟೆಗೆ ವೆಲ್ಲಿಯಮಾಬಳತ್ ನಲ್ಲಿ ಸ್ಪೀಕರ್ ರಾಜ್ಯಪಾಲರಿಗೆ ಧ್ವಜ ಹಸ್ತಾಂತರಿಸಲಿದ್ದಾರೆ.

         ಸಾಂಸ್ಕøತಿಕ ಕಲಾ ಪ್ರಕಾರಗಳೊಂದಿಗೆ ಮೆರವಣಿಗೆಯಲ್ಲಿ ಕೇಂದ್ರ ರಾಜ್ಯ ಸರ್ಕಾರ, ಅರೆ ಸರ್ಕಾರಿ, ಸಹಕಾರಿ ಮತ್ತು ಸ್ಥಳೀಯಾಡಳಿತ ಇಲಾಖೆಗಳ ಸುಮಾರು 60 ತೇರುಗಳು ಅಣಿಯಾಗಲಿವೆ. ಸಂಗೀತ ವಾದ್ಯಗಳ ಜೊತೆಗೆ ಕೇರಳ ಪೋಲೀಸ್ ಅಶ್ವದಳ ಮತ್ತು ವಿವಿಧ ಪಡೆಗಳ ಬ್ಯಾಂಡ್‍ಗಳು ಮೆರವಣಿಗೆಗೆ ಮೆರುಗು ನೀಡಲಿವೆ. ಮೆರವಣಿಗೆ ಸಂಪೂರ್ಣ ಹಸಿರಿನಿಂದ ಕೂಡಿರುತ್ತದೆ.

            ಕೇರಳದ ಕಲಾ ಪ್ರಕಾರಗಳಾದ ತೆಯಂ, ಕಥಕ್ಕಳಿ, ವೇಳಕಳಿ, ಪಡಯಣಿ, ಪುಲಿಕಳಿ, ನೀಲಕವಾಡಿ, ಪೂಕಾವಾಡಿ, ಚಿಂತ್ ಕಾವಾಡಿ, ಅಮ್ಮಂಕುಡಂ ಮೇಳಗಳಲ್ಲಿ ತಮ್ಮದೇ ಮೇಳದೊಂದಿಗೆ ಕುಣಿದು ಕುಪ್ಪಳಿಸುವರು. ಪಂಚವಾದ್ಯಂ, ಚೆಂಡಮೇಳ, ಶಿಂಗಾರಿ ಮೇಳ, ಬಂಟು ಮೇಳ, ಪೆರುಂಬರÀಗಳು ಮೇಳಗಳಲ್ಲಿ ಮೂಡಿಬರಲಿವೆ. ನರ್ತಕರೂ ಪ್ರದರ್ಶನ ನೀಡಲಿದ್ದಾರೆ. 

            ಕೇರಳದ ಮತಮೈತ್ರಿ ಸಂಸ್ಕೃತಿಯ ಪ್ರತೀಕವಾಗಿ ಒಪ್ಪನ, ಮಾರ್ಗಂಕಳಿ, ದಫಮುಟ್, ತಿರುವಾದಿರ, ಕೋಲ್ಕಳಿ ನೃತ್ಯಗಳು ನಡೆಯಲಿವೆ.ಮಯೂರ ನೃತ್ಯ, ಪಾರುಂತಾಟಂ, ಗರುಡ ಪರವ, ಅರ್ಜುನ ನೃತ್ಯದಿಂದ ಕುಮ್ಮಟಿಕಲಿವರೆಗೆ ನಾಲ್ಕು ಡಜನ್ ವಿವಿಧ ಕೇರಳದ ಕಲಾ ಪ್ರಕಾರಗಳುರಿತರ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರುಗು ನೀಡಲಿವೆ. .

                     ಒಡಿಶಾ, ರಾಜಸ್ಥಾನ, ಗುಜರಾತ್, ಅಸ್ಸಾಂ, ತಮಿಳುನಾಡು, ಕರ್ನಾಟಕ ಮತ್ತು ಉತ್ತರ ಪ್ರದೇಶ ರಾಜ್ಯಗಳಿಂದ ತಂಡಗಳು ಜೊತೆಯಾಗಲಿವೆ. ಬೋಡೋ ಜಾನಪದ ನೃತ್ಯ, ಚಾರಿ ಜಾನಪದ ನೃತ್ಯ, ಡಾಂಗಿ, ಬಡಾಯಿ ನೃತ್ಯ, ವೀರಗಾಸೆ ನೃತ್ಯ, ಮಯೂರ್ ನತ್ಯ, ದಾಸಲಪುರಿ ಜಾನಪದ ನೃತ್ಯ, ಟಪ್ಪು ನೃತ್ಯ, ಲಾವಣಿ ನೃತ್ಯ ಮುಂತಾದ ವಿವಿಧ ರಾಜ್ಯಗಳ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಇರುತ್ತವೆ.

             ವಿಕಲಚೇತನ ಮಕ್ಕಳಿಗೆ ಶೋಭಾಯಾತ್ರೆ ವೀಕ್ಷಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕ ಗ್ರಂಥಾಲಯದ ಮುಂಭಾಗ ವಿವಿಐಪಿ ಮಂಟಪ, ವಿಶ್ವವಿದ್ಯಾನಿಲಯ ಕಾಲೇಜು ಮುಂಭಾಗ ವಿಐಪಿ ಪೆವಿಲಿಯನ್, ಮ್ಯೂಸಿಯಂ ಗೇಟ್ ಎದುರು ವಿಶೇಷ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. .ಮಧ್ಯಾಹ್ನದ ನಂತರ ನಗರದಲ್ಲಿ ಟ್ರಾಫಿಕ್ ನಿಯಂತ್ರಣವಿರುತ್ತದೆ, ಆದರೆ ಮೆರವಣಿಗೆಯಲ್ಲಿ ಭಾಗವಹಿಸಲು ವೀಕ್ಷಕರು ಪ್ರಯಾಣಿಸಬಹುದು.ಮೆರವಣಿಗೆ ವೀಕ್ಷಿಸಲು ಸೌಲಭ್ಯಗಳಿವೆ.ಮೆರವಣಿಗೆ ಸುಗಮವಾಗಿ ನಡೆಯಲು ನಗರದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries