ವಯನಾಡ್: ಜಿಲ್ಲೆಯ ನದಿಗಳಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೊಸಳೆಗಳು ಹೆಚ್ಚಾಗಿ ಪನಮರಮ್ ವಲಿಯ ನದಿ, ಕುಡಲ್ಕಡವಿ ಮತ್ತು ವೆನ್ನಿಯೋಟ್ ನದಿಗಳಲ್ಲಿ ಕಂಡುಬಂದಿವೆ.
ಇವುಗಳ ಹೆಚ್ಚಳಕ್ಕೆ ಕೋಳಿ ಅಂಗಡಿಗಳ ಕಸವನ್ನು ರಾತ್ರಿ ವೇಳೆ ನದಿಗಳಿಗೆ ಎಸೆಯುವುದು ಮತ್ತು ಸೂಕ್ತ ವಾಸಸ್ಥಳ ಇಲ್ಲದಿರುವುದೇ ಕಾರಣ ಎನ್ನುತ್ತಾರೆ ಸ್ಥಳೀಯರು. ಹಗಲಿನಲ್ಲಿ ನದಿಗಳಿಂದ ಜಮೀನುಗಳಿಗೆ ನುಗ್ಗಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.
ಕಳೆದ ವರ್ಷ ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದ ಗೃಹಿಣಿಯನ್ನು ಮೊಸಳೆ ಕಚ್ಚಿ ಗಾಯಗೊಳಿಸಿತ್ತು. ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದಾಗ ಹಿಂದಿನಿಂದ ಮೊಸಳೆ ಬಂದು ಕೈಗೆ ಜಿಗಿದಿತ್ತು. ಗೃಹಿಣಿ ಮೊಸಳೆ ಬಾಯಿಯಿಂದ ಕೈ ಎಳೆದು ಬಚಾವಾಗಿದ್ದರು. ಮೊಟ್ಟೆ ಇರಿಸಲು ಹೆಚ್ಚಾಗಿ ದಡಕ್ಕೆ ಬರುತ್ತವೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.





